ಬೆಂಗಳೂರು,ಫೆ.06-ರಾಜ್ಯಪಾಲರ ಭಾಷಣ ಆರಂಭವಾಗುತ್ತಿದ್ದಂತೆ ಇಂದು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಬಹುಮತವಿಲ್ಲ ಮತ್ತು ರಾಜ್ಯಪಾಲರಿಂದ ಸುಳ್ಳು ಭಾಷಣ ಓದಿಸಲಾಗುತ್ತಿದೆ ಎಂದು ಬಿಜೆಪಿ ತಕರಾರು ತೆಗೆದು ಗಲಾಟೆ ಆರಂಭಿಸಿತು.
ಎಷ್ಟೇ ಪ್ರಯತ್ನ ಪಟ್ಟರೂ ಗದ್ದಲ ನಿಲ್ಲಲಿಲ್ಲ ಬದಲಾಗಿ 22 ಪುಟಗಳ ಭಾಷಣವನ್ನು ಎರಡು ಪುಟಗಳಿಗೆ ಮೊಟಕುಗೊಳಿಸಿ ಸದನದಲ್ಲಿ ಮಂಡಿಸುತ್ತಿರುವುದಾಗಿ ರಾಜ್ಯಪಾಲರು ಪ್ರಕಟಿಸಿದರು.
ರಾಜ್ಯಪಾಲರನ್ನು ಆರಂಭದಲ್ಲಿ ರತ್ನ ಗಂಭಳಿ ಮೇಲೆ ಗೌರವಾದರಗಳೊಂದಿಗೆ ಮುಖ್ಯಮಂತ್ರಿ ಸಹಿತ ಸದನದ ಗಣ್ಯರು ಕರೆದೋಯ್ದರು, ಅದೇ ಗೌರವದಿಂದಲೇ ಬೀಳ್ಕೊಟ್ಟರು.
ಕಾಂಗ್ರೇಸ್ನ ನಾಲ್ವರು ಅತೃಪ್ತರು ಸೇರಿದಂತೆ ಏಳು ಶಾಸಕರು ಜೆಡಿಎಸ್ನ ಒಬ್ಬ ಶಾಸಕ ಮತ್ತು ಇಬ್ಬರೂ ಪಕ್ಷೇತರು ಗೈರು ಹಾಜರಾದ ಕಾರಣ ಬಿಜೆಪಿ ಗಲಾಟೆ ಎಬ್ಬಿಸಿತು.
ಬಿಜೆಪಿಯ ಇಬ್ಬರು ಶಾಸಕರು ಮತ್ತು ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ ಸದನಕ್ಕೆ ಗೈರು ಹಾಜರಾಗಿದ್ದರು.
ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸದನವನ್ನು ನಾಳೆಗೆ ಮುಂದೂಡಲಾಯಿತು. ಇತ್ತ ವಿಧಾನಪರಿಷತ್ನಲ್ಲೂ ಕಲಾಪ ನಾಳೆಗೆ ಮುಂದೂಡಲಾಯಿತು.