ಬೆಂಗಳೂರು, ಫೆ.6- ರಾಜ್ಯದಲ್ಲಿರುವ ಎಲ್ಲ ಕುಟುಂಬಗಳಿಗೆ ವಿದ್ಯುತ್ಚ್ಛಕ್ತಿ ಸಂಪರ್ಕ ಕಲ್ಪಿಸುವ ಗುರಿಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಸಾಧಿಸಿದೆ ಎಂದು ವಿ.ಆರ್.ವಾಲಾ ಹೇಳಿದ್ದಾರೆ.
ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ನವೀಕರಿಸಬಹುದಾದ ಮತ್ತು ಬಂಧಕ ವಿದ್ಯುತ್ ಉತ್ಪಾದನಾ ಮೂಲಗಳಿಂದ 465 ಮೆಗಾವ್ಯಾಟ್ ಸಾಮಥ್ರ್ಯದ ವಿದ್ಯುತ್ಚ್ಛಕ್ತಿ ಸೇರ್ಪಡೆಯಾಗಿದೆ.
ವಿದ್ಯುತ್ ಪ್ರಸರಣ ಕಾರ್ಯಚಾಲವನ್ನು ಸದೃಢಗೊಳಿಸಲು 15 ಹೊಸ ಉಪಕೇಂದ್ರಗಳು, 215 ಸಕ್ರ್ಯೂಟ್ ಕಿಲೋ ಮೀಟರ್ಗಳ ವಿದ್ಯುತ್ ಪ್ರಸರಣ ಮಾರ್ಗವನ್ನು ಕಾರ್ಯಜಾಲಕ್ಕೆ ಸೇರಿಸಲಾಗಿದೆ.
ವಿದ್ಯುತ್ ಕಾರ್ಯಜಾಲವನ್ನು ಸದೃಢಗೊಳಿಸುವ ಉದ್ದೇಶದಿಂದ 55,422 ವಿದ್ಯುತ್ ವಿತರಣ ಪರಿವರ್ತಕಗಳನ್ನು ಅಳವಡಿಸಲಾಗಿದೆ ಎಂಬ ಅಂಶವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬಹಿರಂಗಗೊಳಿಸಿದ್ದಾರೆ.