ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಪರಾಕ್ರಮ ಸಾಧಿಸಿದೆ. ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31 ಉಪಗ್ರಹವನ್ನ ಫ್ರಾನ್ಸ್ನ ಜಿಯಾನದಲ್ಲಿರುವ ಏರಿಯಾನ್ ಸ್ಪೇಸ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇಂದು ನಸುಕಿನ ಜಾವ 2: 31ಕ್ಕೆ 2535 ಕೆಜಿ ತೂಕದ ಈ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದು, 42 ನಿಮಿಷದಲ್ಲಿ ತನ್ನ ಕಕ್ಷೆ ಸೇರಿದೆ. Gsat-31 ಉಪಗ್ರಹ ಭಾರತದ ಸಾಂಪ್ರದಾಯಿಕ ಇನ್ಸಾಟ್- ಜಿಸ್ಯಾಟ್ ಸರಣಿಯ ಮುಂದುವರೆದ ಭಾಗವಾಗಿದೆ ಎನ್ನಲಾಗಿದೆ.
ಮಾಸ್ಟರ್ ಕಂಟ್ರೋಲ್ ಸೌಲಭ್ಯವಿರುವ ಹಾಸನದ ಇಸ್ರೋದ ಕೇಂದ್ರದಲ್ಲಿ ಉಪಗ್ರಹವು ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿದೆ. ಈ ಉಪಗ್ರಹ ನೌಕೆಯಿಂದಾಗಿ ಸಂವಹನ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಗಮನಾರ್ಹ ಪ್ರಗತಿ ಕಾಣಲಿದೆ. ದ್ವೀಪ ಹಾಗೂ ಸಮುದ್ರದಂತಹ ಪ್ರದೇಶಗಳಲ್ಲಿ ಕೂಡಾ ಸಂವಹನಕ್ಕೆ ಈ ಉಪಗ್ರಹ ಸಹಕಾರಿಯಾಗಲಿದೆ.
Gsat-31 ಭಾರತದ 40ನೇ ಸಂವಹನ ನೌಕೆ. 15 ವರ್ಷ ಇದರ ಆಯಸ್ಸು. ವಿಸ್ಯಾಟ್ ಸಂಪರ್ಕಕ್ಕೆ ಇದು ಅನುಕುಲಕರವಾಗಿರಲಿದೆ. ದೂರದರ್ಶನ ಅಪ್‌ಲಿಂಕ್, ಡಿಟಿಹೆಚ್-ಟೆಲಿವಿಷನ್ ಸೇವೆ, ಡಿಜಿಟಲ್ ಸ್ಯಾಟ್‌ಲ್ಯಾಟ್ ನ್ಯೂಸ್ ಗ್ಯಾದರಿಂಗ್, ಸೆಲ್ಯುಲರ್ ಬ್ಯಾಕ್‌ಹೌಲ್ ಕನೆಕ್ಟಿವಿಟಿ ಸೇರಿದಂತೆ ಮತ್ತೊಂದಿಷ್ಟು ಅಪ್ಲಿಕೇಷನ್‌ಗಳನ್ನ ಪರಿಣಾಮಕಾರಿಯಾಗಿಸಲು Gsat-31ನಿಂದ ಸಾಧ್ಯವಾಗಲಿದೆ. ಜಿಸ್ಯಾಟ್-31 ದೂರಸಂಪರ್ಕ ಸೇವೆಗಳು, ಎಟಿಎಂಗಳಿಗೆ ವಿಸ್ಯಾಟ್ ಸಂಪರ್ಕ, ಶೇರು ವಿನಿಮಯ, ಡಿಜಿಟಲ್ ಸ್ಯಾಟ್‌ಲೈಟ್ ನ್ಯೂಸ್ ಗ್ಯಾದರಿಂಗ್, ಈ-ಆಡಳಿತದ ಅಪ್ಲಿಕೇಷನ್‌ಗಳು, ದೂರಸಂಪರ್ಕ ಅಪ್ಲಿಕೇಷನ್ಸ್‌ಗಳಿಗೆ ಅವಶ್ಯವಿದ್ದಾಗ ಡಾಟಾ ಸಗಟು ರೂಪದಲ್ಲಿ ವರ್ಗಾವಣೆ ಮಾಡೋದಕ್ಕೆ ಅನುಕೂಲಕವಾಗಲಿದೆ ಅಂತ ಇಸ್ರೋ ಅಧ್ಯಕ್ಷ ಡಾ. ಕೆ.ಶಿವನ್ ಹೇಳಿದ್ದಾರೆ. ಆಳ ಸಮುದ್ರ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು, ಅದರಲ್ಲೂ ಅರಬ್ಬೀ ಸಮುದ್ರ, ಬೇ ಆಫ್ ಬೆಂಗಾಲ, ಭಾರತೀಯ ಸಮುದ್ರದಲ್ಲಿ ದೂರಸಂಪರ್ಕ ಹೆಚ್ಚು ಹೆಚ್ಚು ಪರಣಾಮಕಾರಿಯಾಗಿ ಸಾಧಿಸಲು ಇದರಿಂದ ಸಾಧ್ಯವಾಗುತ್ತೆ.
ಜನವರಿ ತಿಂಗಳ ಆರಂಭದಿಂದಲೇ ಈ ಉಪಗ್ರಹ ಉಡಾವಣೆಗೆ ಇಸ್ರೋ- ಯುರೋಪಿಯನ್ ಸ್ಪೇಸ್‌ಪೋರ್ಟ್ ಜಂಟಿ ಅಭಿಯಾನ ನಡೆಸಿದ್ದವು. ಏರಿಯಾನ್ ಸ್ಪೇಸ್ ಉಪಗ್ರಹ ಉಡಾವಣಾ ಕೇಂದ್ರದ ಜತೆ ಇಸ್ರೋ 1981ರಿಂದಲೂ ದ್ವಿಪಕ್ಷೀಯ ಸಂಬಂಧ ಇರಿಸಿದೆ. ಭಾರತದ ಆ್ಯಪಲ್ ಪ್ರಯೋಗಾರ್ಥ Lo3 ನೌಕೆ ಉಡಾವಣೆಯನ್ನೂ ಇಸ್ರೋ-ಏರಿಯಾನ್ ಸ್ಪೇಸ್ ಜಂಟಿಯಾಗಿ