ಬೆಂಗಳೂರು, ಫೆ.6- ಏಷ್ಯಾದ ಮುಂಚೂಣಿ ಬಿ2ಬಿ ಅಂತಾರಾಷ್ಟ್ರೀಯ ಎಕ್ಸ್ಪೆÇ- ಕ್ಲೀನ್ ಇಂಡಿಯಾ ತಂತ್ರಜ್ಞಾನ ವಾರ 2019 ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಫೆ.13ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ವರ್ಚುವಲ್ ಇನ್ಫೋ ಸಿಸ್ಟಮ್ಸ್ ಪ್ರೈ ಲಿ., ಆಯೋಜಿಸುತ್ತಿರುವ ಸ್ವಚ್ಛಭಾರತ ತಂತ್ರಜ್ಞಾನ ವಾರ 2019 ಭಾರತ ಸರ್ಕಾರದ ಸ್ವಚ್ಛ ಭಾರತ ಕನಸಿನ ನಿರೀಕ್ಷೆಗಳಿಗೆ ಸರಿಸಾಟಿಯಾಗಿರಲು ಹೊಸ ಸ್ವಚ್ಛ ಭಾರತಕ್ಕಾಗಿ ಸ್ಮಾರ್ಟ್ ಆದ ಶುಚಿಗೊಳಿಸುವಿಕೆ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸುವ ಏಕೈಕ ಎಕ್ಸ್ಪೆÇೀ ಆಗಿದೆ.
20ಕ್ಕಿಂತ ಹೆಚ್ಚಿನ ದೇಶಗಳಿಂದ 400ಕ್ಕಿಂತ ಹೆಚ್ಚಿನ ಬ್ರ್ಯಾಂಡುಗಳು ಹಾಗೂ 15,000ಕ್ಕಿಂತ ಹೆಚ್ಚಿನ ಸಂದರ್ಶಕರನ್ನು ನಿರೀಕ್ಷಿಸಿರುವ ಎಕ್ಸ್ಪೆÇೀ ಒಂದೇ ಸೂರಿನಡಿ ನಾಲ್ಕು ಸಮಾನಾಂತರ ಪ್ರದರ್ಶನಗಳನ್ನು ಹೊಂದಿರಲಿದೆ.