ಬೆಂಗಳೂರು, ಫೆ.6- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ಗಳ ಛಾವಣಿಯ ಸೌರಶಕ್ತಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.
ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸುತ್ತಿರುವ (ಕೆಐಎಬಿ) ಈಗ ಪರಿಸರ ಸ್ನೇಹಿ, ಸೌರ ವಿದ್ಯುತ್ ಉತ್ಪಾದನೆಗೆ ನಾಂದಿ ಹಾಡಿದೆ.
ಇಂದು ಸನ್ ಶಾಟ್ ಸಂಸ್ಥೆಯ ಜೊತೆ ಒಪ್ಪಂದದಂತೆ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ವಿಮಾನ ನಿಲ್ದಾಣದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮತ್ತು ಸನ್ ಶಾರ್ಟ್ ಎಂಡಿ ರಾಹುಲ್ ದಾಸರಿ ಇದಕ್ಕೆ ಸಾಕ್ಷಿಯಾದರು.