ನವದೆಹಲಿ: ಸಿಬಿಐ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆಯುತ್ತಿದ್ದ ಸಂಘರ್ಷ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯಲ್ಲಿದ್ದು, ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಸಹಕರಿಸುವಂತೆ ಸುಪ್ರೀಂಕೋರ್ಟ್ ಕೋಲ್ಕತ್ತಾ ಪೊಲೀಸ್ ಕಮಿಷನರ್ಗೆ ಸೂಚಿಸಿದೆ. ಅಷ್ಟೇ ಅಲ್ಲ ಸಿಬಿಐ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಸೂಚಿಸಿದೆ. ಆದರೆ ಸಿಬಿಐಗೆ ಅವರನ್ನ ಬಂದಿಸದಂತೆಯೂ ನಿರ್ದೇಶನ ನೀಡಿದೆ.
ಈ ವಿಷಯವಾಗಿ ಮಾತನಾಡಿರುವ ಮಮತಾ ಬ್ಯಾನರ್ಜಿ, ರಾಜೀವ್ ಕುಮಾರ್ ವಿಚಾರಣೆ ಹಾಗೂ ತನಿಖೆ ಎದುರಿಸಲು ಹಿಂಜರಿದಿಲ್ಲ. ವಿಚಾರಣೆಗೆ ಲಭ್ಯವಿಲ್ಲ ಎಂದು ಹೇಳಿಯೇ ಇಲ್ಲ. ಪರಸ್ಪರ ಸ್ಥಳಗಳಲ್ಲಿ ಭೇಟಿಯಾಗೋಣ. ನೀವು ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧ ಎಂದಿದ್ದಾರೆ.
ಆದರೆ ಸಿಬಿಐ ಅಧಿಕಾರಿಗಳಿಗೆ ರಾಜೀವ್ ಕುಮಾರ್ ಬಂಧಿಸುವ ಬಯಕೆ ಇತ್ತು. ಯಾವುದೇ ನೋಟಿಸ್ ನೀಡದೇ ಬಂಧಿಸುವ ಪ್ಲಾನ್ ಮಾಡಲಾಗಿತ್ತು. ಅದನ್ನ ನಾವು ವಿರೋಧಿಸಿದ್ದೇವೆ. ಸುಪ್ರೀಂ ನಿರ್ದೇಶನ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಿದೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.
Rajeev Kumar Can’t Be Arrested, Top Court Tells, Mamata Banerjee Calls It “Moral Victory”