ನವದೆಹಲಿ : ಉದ್ದೇಶ ಪೂರ್ವಕ ಸುಸ್ತಿದಾರರಾಗಿ ಬ್ರಿಟನ್ಗೆ ತೆರಳಿದ್ದ ಉದ್ಯಮಿ ವಿಜಯ್ ಮಲ್ಯರನ್ನು ಗಡಿಪಾರು ಮಾಡಲು ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ.
ಮಲ್ಯ ಅವರ ಗಡಿಪಾರಿನ ಆದೇಶಕ್ಕೆ ಬ್ರಿಟನ್ ಸರ್ಕಾರದ ಗೃಹ ಕಾರ್ಯದರ್ಶಿ ಸಾಜಿದ್ ಜಾವೆದ್ ಸಹಿ ಹಾಕಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ವೆಸ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಜಯ್ ಮಲ್ಯ ಹಸ್ತಾಂತರಕ್ಕೆ ತೀರ್ಪು ನೀಡಿತ್ತು. ಜತೆಗೆ ಗೃಹ ಇಲಾಖೆ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಎಮ್ಮ ಆರ್ಬುಥನ್ನಾಟ್ ಆದೇಶ ನೀಡಿದ್ದರು.
ಆದರೂ ಈ ಆದೇಶವನ್ನು ಪ್ರಶ್ನಿಸಿ ಕೋರ್ಟ್ನಲ್ಲಿ ದಾವೆ ಹೂಡಲು ಮಲ್ಯ ಅವರಿಗೆ ಬ್ರಿಟನ್ ಸರ್ಕಾರ 14 ದಿನಗಳ ಸಮಯಾವಕಾಶ ನೀಡಿದೆ.
ಸಾವಿರಾರು ಕೋಟಿ ರೂ. ಸಾಲ ಮಾಡಿ ಉದ್ದೇಶ ಪೂರಿತ ಸುಸ್ತಿದಾರರಾಗಿದ್ದ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಇಡಿ ತಂಡವೊಂದು ಬ್ರಿಟನ್ಗೆ ತೆರಳಿತ್ತು.