ಬೆಂಗಳೂರು, ಫೆ.5-ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಚಿಂತಿಸಿದ್ದಾರೆ.
ವೀರಶೈವ ಲಿಂಗಾಯತ ಯುವ ಮುಖಂಡರಿಂದ ಸ್ಪರ್ಧೆಗಿಳಿಯುವಂತೆ ಬಿದರಿ ಅವರಿಗೆ ಒತ್ತಡ ಹೇರಲಾಗುತ್ತಿದೆ.ಆದರೆ, ಸಮುದಾಯದ ಎಲ್ಲ ಮುಖಂಡರ ಒಗ್ಗಟ್ಟಿನಿಂದ ನೀಡುವುದಾದರೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗುವುದಾಗಿ ಬಿದರಿ ಹೇಳಿದ್ದಾರೆ ಎನ್ನಲಾಗಿದೆ.
ಮುಂದಿನ ತಿಂಗಳು ಮಹಾಸಭಾದ ಚುನಾವಣೆ ನಡೆಯುವ ಸಾಧ್ಯತೆಗಳಿವೆ.ಮಹಾಸಭಾದ ಹಾಲಿ ಅಧ್ಯಕ್ಷರಾಗಿರುವ ಎನ್.ತಿಪ್ಪಣ್ಣ ಅವರನ್ನು ಬದಲಾಯಿಸುವಂತೆ ಒತ್ತಡ ಹೆಚ್ಚಾಗುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಸಮುದಾಯದ ಮುಖಂಡರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಬಿದರಿ ಅವರು ಅಧ್ಯಕ್ಷರಾದರೆ ಮಹಾಸಭಾ ಮುನ್ನಡೆಸಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೆಲವರಲ್ಲಿದೆ ಎಂದು ಮೂಲಗಳು ತಿಳಿಸಿವೆ.