
ಬೆಂಗಳೂರು,ಫೆ.4- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದು ಡಾಕಾ ಮೇಯರ್ ಮತ್ತು ತಂಡ ಭೇಟಿ ನೀಡಿ ಪಾಲಿಕೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಡಾಕಾ ಮೇಯರ್ ಮೊಹಮ್ಮದ್ ಸಯ್ಯದ್ ಖೋಕೋನ್ ಮತ್ತು ತಂಡವನ್ನು ಮೇಯರ್ ಗಂಗಾಂಬಿಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಸಿ 40 ವಿಚಾರದ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಏರ್ ಪೊಲ್ಯೂಷನ್ ಕಂಟ್ರೊಲ್ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಬೆಂಗಳೂರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಪೊಲ್ಯುಷನ್ ಕಂಟ್ರೋಲ್ ತಮ್ಮ ಮುಂದಿರುವ ಸವಾಲು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಡಾಕಾ ಅಧಿಕಾರಿಗಳಿಗೆ ಪಿಪಿಟಿ ಮೂಲಕ ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಪರಸ್ಪರ ಗೌರವ ಕಾಣಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.