ಮತೊಂದು ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಸಂಸ್ಥೆ

ಬೆಂಗಳೂರು, ಫೆ.4-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಫೆ.6 ಜಿಸ್ಯಾಟ್-31 ಸಂಪರ್ಕ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಈಗಾಗಲೇ ಬಾಹ್ಯಾಕಾಶ ಸಂಶೋಧನಾ ಮಹತ್ವದ ಮೈಲಿಗಲ್ಲು ಸಾಧಿಸಿರುವ ಇಸ್ರೋ ಉಡಾವಣೆ ಮಾಡುತ್ತಿರುವ 40ನೇ ಸಂಪರ್ಕ ಉಪಗ್ರಹ ಇದಾಗಿದೆ.

2535 ಕೆಜಿ ತೂಕದ ಕೆಯು-ಬ್ಯಾಂಡ್ ತಂತ್ರಜ್ಞಾನ ಹೊಂದಿರುವ ಈ ಅತ್ಯಾಧುನಿಕ ಉಪಗ್ರಹವನ್ನು ಕೌರುವಿನಲ್ಲಿರುವ ಫ್ರೆಂಚ್ ಗಯಾನಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಏರಿಯನ್-5 ಗಗನ ನೌಕೆ ಮೂಲಕ ಉಡ್ಡಾಯನ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಇಸ್ರೋ ಪ್ರಕಟಣೆ ತಿಳಿಸಿದೆ.

15 ವರ್ಷಗಳ ಕಾಲ ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುವ ಸಾಮಥ್ರ್ಯ ಹೊಂದಿರುವ ಜಿಸ್ಯಾಟ್-31 ಅಂತರಿಕ್ಷ ಕಕ್ಷೆಗೆ ಸೇರ್ಪಡೆಯಾಗಿ ಸಂಪರ್ಕ ಮತ್ತು ಸಂವಹನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಮಹತ್ವದ ಮಾಹಿತಿ ಮತ್ತು ಮುನ್ಸೂಚನೆ ನೀಡಲಿದೆ.

ಈಗಾಗಲೇ ಇಸ್ರೋನ ಇತರ ಸಂಪರ್ಕ ಉಪಗ್ರಹಗಳು ಜ್ಯೋತಿರ್ಮಂಡಲದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳೊಂದಿಗೆ ಜಿಸ್ಯಾಟ್-31 ಸಮರ್ಪಕವಾಗಿ ಮಾಹಿತಿ ರವಾನಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ