ಟೀಂ ಇಂಡಿಯಾ ಗೆಲುವಿಗೆ ಕಾರಣವಾಯ್ತು ಆ ಒಂದು ರನೌಟ್

ನಿನ್ನೆ ಕೇನ್ ವಿಲಿಯಮ್ಸನ್ ಪಡೆ ವಿರುದ್ಧ ವೆಲ್ಲಿಂಗ್ಟನ್ ಅಂಗಳದಲ್ಲಿ ರೋಹಿತ್ ಪಡೆ 35 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಟೀಂ ಇಂಡಿಯಾ ಗೆಲುವಿಗೆ ಇಡೀ ತಂಡದ ಪರಿಶ್ರಮವೇ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಡೀ ಪಂದ್ಯಕ್ಕೆ ಟ್ವೀಸ್ ಕೊಟ್ಟಿದ್ದು ಆ ಒಂದು ರನೌಟ್.

ರೋಹಿತ್ ಪಡೆಗೆ ಸುಲಭವಾಗಿರಲಿಲ್ಲ ಕೊನೆಯ ಗೆಲುವು
253 ರನ್ಗಳ ಸವಾಲನ್ನ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ತಂಡದ ವೇಗಿಗಳು ಆರಂಭದಲ್ಲೆ ಕಿವೀಸ್ ಬ್ಯಾಟ್ಸ್ಮನ್ಗಳಿಗೆ ಶಾಕ್ ಕೊಟ್ರು. ಆದರೆ ಮಿಡ್ಲ್ ಆರ್ಡರ್ನಲ್ಲಿ ಬಂದ ಕೇನ್ ವಿಲಿಯಮ್ಸ್ ನ್ ಮತ್ತು ಟಾಮ್ ಲಾಥಮ್ slow  aNd  Steady  ಇನ್ನಿಂಗ್ಸ್ ಕಟ್ಟಿ ಟೀಂ ಇಂಡಿಯಾಕ್ಕೆ ಆತಂಕ ಹುಟ್ಟಿದ್ರು. ಇವವರಿಬ್ಬರು ಔಟಾದ ನಂತರವೂ ರೋಹಿತ್ ಪಡೆಗೆ ಸವಾಲುಗಳು ಮತ್ತೆ ಮತ್ತೆ ಎದುರಾದವು.

7ನೇ ವಿಕೆಟ್ಗೆ ಜೊತೆಗೂಡಿದ ಆಲ್ರೌಂಡರ್ ಜೇಮ್ಸ್ ನಿಶಾಮ್ ಮತ್ತು ಮಿಶೆಲ್ ಸ್ಯಾಂಟ್ನರ್ 41 ರನ್ಗಳ ಜೊತೆಯಾಟ ನೀಡಿ ಆತಂಕ ಹುಟ್ಟಿಸಿದ್ರು. ಈ ಜೋಡಿ ವೇಗವಾಗಿ ರನ್ಗಳ ಕದಿಯುತ್ತಾ ಟೀಂ ಇಂಡಿಯಾ ಪಾಳೆಯದಲ್ಲಿ ಆತಂಕ ಹುಟ್ಟಿಸಿದ್ರು.

37ನೇ ಓವರ್ನಲ್ಲಿ ಮಾಹಿ ಮಾಡಿದ್ರು ಮ್ಯಾಜಿಕ್
ಹೀಗೆ ಕಠಿಣ ಸಂದರ್ಭಗಳನ್ನ ಎದುರಿಸುತ್ತಾ ಸಾಗಿದ ಟೀಂ ಇಂಡಿಯಾಕ್ಕೆ ತಂಡದ ಮಿಸ್ಟರ್ ಕೂಲ್ ಎಂಎ.ಎಸ್.ಧೋನಿ 37ನೇ ಓವರ್ನಲ್ಲಿ ಮ್ಯಾಜಿಕ್ ಮಾಡಿದ್ರು. ತಂಡದ ಪಾರ್ಟ್ ಟೈಮ್ ಬೌಲರ್ ಕೇದಾರ್ ಜಾಧವ್ ಮಾಡಿದ ಓವರ್ನಲ್ಲಿ ಆಲ್ರೌಂಡರ್ ನಿಶಾಮ್ ಬ್ಯಾಟಿಂಗ್ ಮಾಡುತ್ತಿದ್ರು. ಜಾಧವ್ ಎಸೆದ ಎರಡನೇ ಎಸೆತ ನಿಶಾಮ್ ಪ್ಯಾಡ್ಗೆ ತಗಲಿತು. ಆಗ ತಕ್ಷಣ ಅಂಪೈರ್ಗೆ ಟೀಂ ಇಂಡಿಯಾ ಆಟಗಾರು ಮನವಿ ಮಾಡಿದ್ರು. ಅಂಪೈಯರ್ ನಾಟೌಟ್ ಕೊಡುತ್ತಿದ್ದಂತೆ ಸ್ಟ್ರೈಕ್ನಲ್ಲಿದ್ದ ನಿಶಾಮ್ ರನ್ ಚೆಂಡು ಧೋನಿ ಹಿಂದಿದೆ ಅನ್ನೋದನ್ನ ನೋಡಲಿಲ್ಲ. ನಿಶಾಮ್ ಕ್ರೀಸ್ ಬಿಟ್ಟಿದನ್ನ ಕಂಡ ಧೋನಿ ತಮ್ಮ ಬಲ ಬದಿ ಇದ್ದ ಚೆಂಡನ್ನ ವಿಕೆಟ್ಗೆ ಹೊಡೆದು ಸಂಭ್ರಮಿಸಿದ್ರು.

review  ಹೋದ ಕಿವೀಸ್ಗೆ Third umpire ಕೂಡ ಔಟೆಂದು ಉತ್ತರ ಬಂತು. ಇದು ಇಡೀ ಪಂದ್ಯಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಟೀಂ ಇಂಡಿಯಾಕ್ಕೆ ಹೋದ ಜೀವ ಮತ್ತೆ ಬಂತು. ಜೊತೆಗೆ ಟೀಂ ಇಂಡಿಯಾದ ಗೆಲುವು ಕೂಡ ಛಿoಟಿಜಿiಡಿm ಆಯ್ತು. ಧೋನಿ ಮಾಡಿದ ಈ ಒಂದು ರನೌಟ್ ಪಂದ್ಯವನ್ನ ಗೆಲ್ಲುವಂತೆ ಮಾಡಿತು. ಇಲ್ಲದಿದ್ದರೆ ಗೆಲುವು ಕನಸಿನ ಮಾತಗುತ್ತಿತ್ತು.
ವೇಗವಾಗಿ ರಾಸ್ ಟೇಲರ್ ಸ್ಟಂಪ್ ಮಾಡಿದ್ದ ಮಾಹಿ.

ಇಷ್ಟೆ ಅಲ್ಲ ಇದಕ್ಕೂ ಮುನ್ನ ಮೌಂಟ್ ಮೌಂಗನೂಯಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಧೋನಿ ಚುರುಕಿನ ಸ್ಟಂಪ್ ಮಾಡಿ ರಾಸ್ ಟೇಲರ್ ವಿಕೆಟ್ ಪಡೆದಿದ್ರು.

ಸದ್ಯ ಧೋನಿ ಬ್ಯಾಟಿಂಗ್ನಲ್ಲಿ ಈ ಹಿಂದಿನಂತೆ ಅಬ್ಬರಿಸುತ್ತಿಲ್ಲ. ಆದರೆ ವಿಕೆಟ್ ಕೀಪಿಂಗ್ ಮೂಲಕ ಪಂದ್ಯವನ್ನ ಗೆಲ್ಲಿಸಿಕೊಡುತ್ತಿದ್ದಾರೆ ಅಂದ್ರೆ ಇದಕ್ಕೆ ಇವರ ಚಾಣಾಕ್ಷತನವೇ ಕಾರಣ ಅಲ್ವ .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ