ಕಪ್ಪು ಹಣದ ಕುರಿತ ವರದಿ ಬಹಿರಂಗ ಪಡಿಸಲು ನಿರಾಕರಿಸಿದ ಕೇಂದ್ರ

ನವದೆಹಲಿ: ಕಪ್ಪು ಹಣದ ಕುರಿತ ವರದಿಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ವರದಿ ಸದ್ಯ ಸಂಸದೀಯ ಸಮಿತಿಯ ಪರಿಶೀಲನೆಯಲ್ಲಿದೆ. ಹೀಗಾಗಿ ವರದಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ದೆಹಲಿ ಮೂಲದ ಎನ್ಐಪಿಎಫ್ ಪಿ, ಫರಿದಾಬಾದ್ ನ ಎನ್ ಸಿಎಇಆರ್ ಹಾಗೂ ಎನ್ ಐಎಫ್ಎಂ ದೇಶ ಮತ್ತು ವಿದೇಶಗಳಲ್ಲಿನ ಕಪ್ಪು ಹಣದ ಕುರಿತು ಅಧ್ಯಯನ ನಡೆಸಿ 2013-14ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದವು.

ಈ ಮೂರು ಸಂಸ್ಥೆಗಳು ನೀಡಿರುವ ವರದಿ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಅರ್ಜಿ ಸಲ್ಲಿಸಲಾಗಿತ್ತು. ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಎನ್ಐಪಿಎಫ್ ಪಿ ಯಿಂದ ಡಿಸೆಂಬರ್ 30, 2013ರಲ್ಲಿ, ಎನ್ ಸಿಎಇಆರ್ ನಿಂದ ಜುಲೈ 18, 2014ರಲ್ಲಿ ಹಾಗೂ ಎನ್ ಐಎಫ್ಎಂನಿಂದ ಆಗಸ್ಟ್ 21, 2014ರಲ್ಲಿ ವರದಿ ಸ್ವೀಕರಿಸಲಾಗಿದೆ. ಆದರೆ ಆ ವರದಿಗಳು ಸಂಸದೀಯ ಸಮಿತಿ ಪರಿಶೀಲನೆಯಲ್ಲಿರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

Can’t disclose black money reports as Parliamentary Panel examining

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ