ಇಂದಿನ ಲೋಕಸಭೆ ಅಧಿವೇಶನ ಕಲಾಪ ಪಶ್ಚಿಮ ಬಂಗಾಲ ಘಟನೆಗಳೇ ದೊಡ್ಡದಾಗಿ ಅರ್ಧ ದಿನ ವ್ಯರ್ಥವಾಯಿತು. ಲೋಕಸಭೆಯಲ್ಲಿ ಈ ಬಗ್ಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಮನ್ಸ್ಗಳಿಗೆ ಅಲ್ಲಿನ ಅಧಿಕಾರಿಗಳು ಸೂಕ್ತ ಪ್ರತಿಕ್ರಿಯೆ ನೀಡದ ಕಾರಣ ಶಾರದ ಚಿಟ್ ಪಂಡ್ ಹಗರಣದಲ್ಲಿ ಸಿಬಿಐ ಬಲವಂತವಾಗಿ ಕಾರ್ಯಾಚರಣೆ ನಡೆಸಬೇಕಾಯಿತು. ಕೊಲ್ಕತಾ ಪೊಲೀಸರ ವರ್ತನೆ ಕಾನೂನು sಬಾಹಿರ ಎಂದು ಸದನಕ್ಕೆ ವಿವರಿಸಿದರು.
ಶೂನ್ಯ ವೇಳೆಯಲ್ಲಿ ಮಾತನಾಡಿದ ಗೃಹ ಸಚಿವರು ಸುಪ್ರೀಂ ಕೋಟ್ ಆದೇಶದಂತೆ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ. ಅದರೆ ಪೊಲೀಸರ ವರ್ತನೆ ದುರದುಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಟಿಎಂಸಿ ಸದಸ್ಯ ಸೌಗತ್ ರಾಯ್ ಪಶ್ಚಿಮ ಬಂಗಾಲದಲ್ಲಿ ಸಂವಿಧಾನ ಬಿಕ್ಕಟ್ಟು ಉದ್ಭವಿಸಿದೆ ಎಂದು ದೂರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೇಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋದ ಪಕ್ಷಗಳನ್ನು ಮಣಿಸಲು ಕೇಂದ್ರ ಸಿಬಿಐ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಹೇಳಿದರು. ಬಿಜೆಡಿ ನಾಯಕ ಬರ್ತ್ರೂಹರಿ ಮಹತಾಬ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್ಸಿಪಿಯ ಸುಪ್ರಿಯಾ ಸೂಳೆ, ಆರ್ಜೆಡಿಯ ಜಯಪ್ರಕಾಶ್ ನಾರಯಣ್ ಯಾದವ್ ಸೇರಿ ಸಿಬಿಐ ವಿರುದ್ಧ ಆರ್ಭಟಿಸಿದರು. ಪರಿಣಾಮವಾಗಿ ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಮುಂದವರೆದಿದ್ದರಿಂದ ಬೋಜನ ವಿರಾಮಕ್ಕೆ ಮುಂದೂಡಲಾಯಿತು.