ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಅಂಬಾಟಿ ರಾಯ್ಡು ನಿನ್ನೆ ಕಿವೀಸ್ ವಿರುದ್ಧ ಶಾಂಧರ್ ಬ್ಯಾಟಿಂಗ್ ಪರ್ಫಾಮನ್ಸ್ ಕೊಟ್ಟು ಕೊಟ್ಟು ಶೈನ್ ಆದ್ರು. ಕಳೆದ ಕೆಲವು ಪಂದ್ಯಗಳಿಂದ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಟೀಕೆಗೊಳಗಾಗಿದ್ದ ಅಂಬಾಟಿ ಇದೀಗ ಬ್ಯಾಟ್ ಮೂಲಕ ಉ್ತತರ ಕೊಟ್ಟಿದ್ದಾರೆ.
ಕಳೆದ ಆಸಿಸ್ ಮತ್ತು ಮೊನ್ನೆ ಕಿವೀಸ್ ವಿರುದ್ಧ ಆಡಿದ ನಾಲ್ಕು ಪಂದ್ಯಗಳಲ್ಲಿ ಬ್ಯಾಕ್ ಟು ಫ್ಲಾಪ್ ಪರ್ಫಾಮನ್ಸ್ ಕೊಟ್ಟಿದ್ದ ಅಂಬಾಟಿ ರಾಯ್ಡು ಕೊನೆಯ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ಸ್ ಪರ್ಫಾಮನ್ಸ್ ಕೊಟ್ಟು ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಸಾಭೀತು ಮಾಡಿದ್ದಾರೆ.
ಮೊನ್ನೆ ನಡೆದ ಹ್ಯಾಮಿಲ್ಟನ್ ಏಕದಿನ ಪಂದ್ಯದಂತೆ ರೋಹಿತ್ ಪಡೆ ಈ ಬಾರಿಯು ಮುಗ್ಗರಿಸಿ ಬೀಳುತ್ತೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ಅಂಬಾಟಿ ರಾಯ್ಡು ಸಾಲಿಡ್ ಬ್ಯಾಟಿಂಗ್ ಮಾಡಿ ತಂಡವನ್ನ ಕಾಪಾಡಿದ್ರು.
ವಿಜಯ್ ಜೊತೆ 98 ರನ್ಗಳ ಭರ್ಜರಿ ಜೊತೆಯಾಟ
17 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಲ್ಕನೆ ವಿಕೆಟ್ಗೆ ಆಲ್ರೌಂಡರ್ ವಿಜಯ್ ಶಂಕರ್ ಜೊತೆಗೂಡಿ Slow and Steady ಇನ್ನಿಂಗ್ಸ್ ಕಟ್ಟಿದ್ರು. ಆರಂಭದಲ್ಲಿ ರನ್ಗಳಿಸಲು ಪರಾದಾಡಿದ್ರು ನಂತರ ಒಂದೊಂದೆ ರನ್ ಕದಿಯುತ್ತಾ ಸಾಗಿ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು ವಿಜಯ್ ಜೊತೆಗೆ 98 ರನ್ ಗಳ Crucial Partnership ಕಟ್ಟಿಕೊಟ್ರು.
10ನೇ ಏಕದಿನ ಅರ್ಧ ಶತಕ ಬಾರಿಸಿದ ಅಂಬಾಟಿ
ಕಿವೀಸ್ ಬೌಲರ್ಗಳನ್ನ ಸರಿಯಾಗೆ ಬೆಂಡೆತ್ತಿದ ಈ ಹೈದ್ರಾಬಾದ್ ಬ್ಯಾಟ್ಸ್ ಮನ್ 86 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ 10ನೇ ಅರ್ಧ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದ್ರು.
ಕೇದಾರ್ ಜಾಧವ್ ಜೊತೆ 74 ರನ್ ಗಳ ಬೊಂಬಾಟ್ ಬ್ಯಾಟಿಂಗ್
ವಿಜಯ್ ಔಟಾದ ನಂತರ ಐoತಿeಡಿ ಆರ್ಡರ್ನಲ್ಲಿ ಬಂದ ಕೇದಾರ್ ಜಾಧವ್ ಜೊತೆಗೂ ಸಾಲಿಡ್ ಬ್ಯಾಟಿಂಗ್ ಮುಂದುವರೆಸಿದ್ರು. ಜಾಧವ್ ಸಾಥ್ ಪಡೆದ ಅಂಬಾಟಿ 74 ರನ್ಗಳ ರನ್ ಗಳ ಜೊತೆಯಾಟ ನೀಡಿ ತಂಡದ ಸ್ಕೋರ್ ಹೆಚ್ಚಿಸಿದ್ರು.
ಶತಕ ವಂಚಿತರಾದ ಹೈದ್ರಾಬಾದ್ ಬ್ಯಾಟ್ಸ್ಮನ್
ಕಿವೀಸ್ ಬೌಲರ್ಗಳನ್ನ ಮನಬಂದಂತೆ ಚೆಂಡಾಡಿ ಶತಕ ಹೊಸ್ತಿಲಿಗೆ ತಲುಪಿದ್ದ ಅಂಬಾಟಿ ರಾಯ್ಡು ಇನ್ನೇನು ಶತಕ ಬಾರಿಸುತ್ತಾರೆ ಅಂತಾ ಎಲ್ಲರೂ ಭಾವಿಸಿದ್ರು. ಆದರೆ 90 ರನ್ ಗಳಿಸಿದ್ದಾಗ ವೇಗಿ ಮ್ಯಾಟ್ ಹೆನ್ರಿ ಎಸೆತದಲ್ಲಿ ಕಾಲಿನ್ ಮನ್ರೊಗೆ ಕ್ಯಾಚ್ ನೀಡಿ ಹೊರ ನಿರಾಸೆ ಅನುಭವಿಸಿದ್ರು. ಇದರೊಂದಿಗೆ 4ನೇ ಶತಕವನ್ನ ಬಾರಿಸುವ ಅವಕಾಶದಿಂದ ವಂಚಿತರಾದ್ರು.
ಅಂಬಾಟಿ ರಾಯ್ಡು ಬ್ಯಾಟಿಂಗ್
ಎಸೆತ – 113
ರನ್ – 90
ಬೌಂಡರಿ/ ಸಿಕ್ಸರ್ – 8/4
ಸ್ಟ್ರೈಕ್ ರೇಟ್ – 79.64
ಅಂಬಾಟಿ ರಾಯ್ಡು ಒಟ್ಟು 113 ಎಸೆತ ಎದುರಿಸಿ 90 ರನ್ಗಳಿಸಿದ್ರು. ಇದರಲ್ಲಿ 8 ಬೌಂಡರಿ 4 ಸಿಕ್ಸರ್ ಒಳಗೊಂಡಿತ್ತು. 79.64 ಸ್ಟ್ರೈಕ್ ರೇಟ್ ಪಡೆದ್ರು.
ಆಸಿಸ್, ಕಿವೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅಂಬಾಟಿ ರಾಯ್ಡು ಫ್ಲಾಪ್ ಆಗಿದ್ದರಿಂದ ನಾಲ್ಕರ ಕ್ರಮಾಂಕದ ಬಗ್ಗೆ ಮತ್ತೆ ಸಮಸ್ಯೆ ಉಂಟಾಗಿತ್ತು ಇದೀಗ ಅಂಬಾಟಿ ರಾಯ್ಡು ಸಾಲಿಡ್ ಪರ್ಫಾಮನ್ಸ್ನೊಂದಿಗೆ ನಾಲ್ಕನೆ ಸ್ಲಾಟ್ಗೆ ನಾನೇ ಪಫೆಕ್ಟ್ ಬ್ಯಾಟ್ಸ್ಮನ್ ಅಂತಾ ಪ್ರೂವ್ ಮಾಡಿದ್ದಾರೆ.