ಬ್ಯಾಂಕಾಕ್ ನಲ್ಲಿ ಅಪಾಯದಮಟ್ಟ ತಲುಪಿದ ವಾಯುಮಾಲಿನ್ಯ: ಜನರ ಕಣ್ಣು, ಮೂಗಿನಲ್ಲಿ ಹೆಪ್ಪುಗಟ್ಟಿದ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಮಿತಿ ಮೀರುತ್ತಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ಇದರಿಂದಾಗಿ ಜನರು ಬಳಲುತ್ತಿದ್ದಾರೆ.

ವಾಯು ಮಾಲಿನ್ಯನಿಂದಾಗಿ ಜನರ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆ. ಹಲವರ ಮೂಗಿನಲ್ಲಿ ರಕ್ತ ಸೋರುತ್ತಿದೆ. ವಾಯು ಮಾಲಿನ್ಯದ ಅಪಾಯಕ್ಕೆ ಜನತೆ ಆತಂಕ್ಕೊಳಗಾಗಿದ್ದಾರೆ.

ಉಸಿರಾಡುವ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ಪಿಎಂ 2.5 ಇರಬೇಕು. ಆದರೆ, ಬ್ಯಾಂಕಾಕ್​ನ 41ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಮಟ್ಟ ಅಪಾಯಕಾರಿ ಮಟ್ಟವನ್ನೂ ಮೀರಿದೆ ಎಂದು ಥಾಯ್ಲೆಂಡ್​ನ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಿ ವಿರೋಧಿ ಅಭಿಯಾನ ಆರಂಭಿಸಿದ್ದಾರೆ. ಜತೆಗೆ, ಮಾಲಿನ್ಯದ ದುಷ್ಪರಿಣಾಮದಿಂದ ಪಾರಾಗಲು ಯಾವೆಲ್ಲ ರೀತಿಯ ಮಾಸ್ಕ್​ಗಳನ್ನು ಧರಿಸುವುದು ಸುರಕ್ಷಿತ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ವಾಯು ಮಾಲಿನ್ಯಕ್ಕೆ ಕಾರಣವಾದ ಸೂಕ್ಷ್ಮ ಮಾಲಿನ್ಯಕಾರಕಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಥಾಯ್ಲೆಂಡ್​ ಸರ್ಕಾರ ಮೋಡ ಬಿತ್ತನೆ ಮಾಡಿ, ಮಳೆ ತರಿಸುವ ಪ್ರಯತ್ನ ಮಾಡಿತು. ಆದರೆ, ಅದರ ಈ ಪ್ರಯತ್ನ ವಿಫಲವಾಗಿದೆ.

Bleeding Noses And Blood-Red Eyes As Bangkok Battles Toxic Air

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ