ಕೇನ್ ವಿಲಿಯಮ್ಸನ್ ಪಡೆ ವಿರುದ್ಧ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲೂ ಗೆಲುವಿನ ನಗೆ ಬೀರಿ ಸರಣಿಗೆ ಗೆಲುವಿನೊಂದಿಗೆ ಗುಡ್ ಬೈ ಹೇಳಿದೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ತಂಡದ ಬ್ಯಾಟ್ಸ್ ಮನ್ಗಳು ಎಷ್ಟು ಕಾರಣರೋ ತಂಡದ ಬೌಲರ್ಗಳು ಅಷ್ಟೆ ಕಾರಣರಾಗಿದ್ದಾರೆ. ಸರಣಿಯ ಆರಮಭದ ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ಗಳಾಗದ್ದ ತಂಡದ ಬೌಲರ್ಸ್ಗಳು ಐದನೇ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕೊಟ್ಟು ಶೈನ್ ಆದ್ರು.
ಭಾರತ ನೀಡಿದ್ದ 253 ಟಾರ್ಗೆಟ್ ಕಿವೀಸ್ ಗೆ ಇದು ಸುಲಭ ಟಾರ್ಗೆಟ್ ಆಗಿತ್ತು . ಯಾಂಕಂದ್ರೆ ಚೇಸಿಂಗ್ ಪಿಚ್ ಆಗಿದ್ರಿಂದ ಕೇನ್ ವಿಲಿಯಮ್ಸ್ ನ್ ಪಡೆಗೆ ಇದು ಯಾವ ಲೆಕ್ಕವೂ ಆಗಿರಲಿಲ್ಲ.
ಮೊಹ್ಮದ್ ಶಮಿ
ಓವರ್ : 8
ರನ್ : 35
ವಿಕೆಟ್ : 2
253ರನ್ಗಳ ಟಾರ್ಗಟ್ ಬೆನ್ನತ್ತಿದ ಕಿವೀಸ್ಗೆ ವಿಲನ್ ಆಗಿದ್ದು ಮೊಹ್ಮದ್ ಶಮಿ. ಈ ಬೆಂಗಾಲಿ ಬೌಲರ್ ಓಪನರ್ಗಾಳಾದ ಕಾಲಿನ್ ಮನ್ರೊ ಮತ್ತು ಹೆನ್ರಿ ನಿಕೊಲೊಸ್ಗೆ ಪೆವಿಲಿಯನ್ ದಾರಿ ತೋರಿಸಿ ಕಿವೀಸ್ ಗೆ ಆರಂಭದಲ್ಲೆ ಶಾಕ್ ಕೊಟ್ರು. 8 ಓವರ್ ಬೌಲ್ ಮಾಡಿದ ಘಾತಕ ವೇಗಿ 35 ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದ್ರು.
ಯಜ್ವಿಂದರ್ ಚಹಲ್
ಓವರ್ 10
ರನ್ 41
ವಿಕೆಟ್ 03
ಮತ್ತೊಮ್ಮೆ ಸೂಪರ್ ಸ್ಪೆಲ್ ಮಾಡಿದ ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ ಯಜ್ವಿಂದರ್ ಚಹಲ್ ವೆಲ್ಲಿಂಗ್ಟನ್ ಅಂಗಳದ್ಲಲೂ ಮ್ಯಾಜಿಕ್ ಮಾಡಿದ್ರು. ಮಿಡ್ಲ್ ಓವರ್ನಲ್ಲಿ ಕಣಕ್ಕಿಳಿದ ಮಿಸ್ಟ್ರಿ ಬೌಲರ್ ಟಾಮ್ ಲಾಥಮ್, ಆಲ್ರೌಂಡರ್ ಗ್ರಾಂಡ್ ಹೋಮ್ ಮತ್ತು ಂsಣಟe ಅವರ ವಿಕೆಟ್ಗಳನ್ನ ಪಡೆದು ಕಿವೀಸ್ನ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್ನ್ನ ಛಿoಟಟಚಿಠಿse ಮಾಡಿದ್ರು. ಒಟ್ಟು ಹತ್ತು ಓವರ್ ಬೌಲಿಂಗ್ ಮಾಡಿ 41 ರನ್ ಕೊಟ್ಟರು
ಹಾರ್ದಿಕ್ ಪಾಂಡ್ಯ
ಓವರ್ – 8
ರನ್ – 50
ವಿಕೆಟ್ – 2
ಭರ್ಜರಿ ಫಾರ್ಮ್ನಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ ಆಲ್ರೌಂಡರ್ ಪರ್ಫಾಮನ್ಸ್ ಕೊಟ್ಟು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿದ್ರು. 11ನೇ ಓವರ್ನಲ್ಲಿ ದಾಲಿಗಿಳಿದ ಹಾರ್ದಿಕ್ ಪಾಂಡ್ಯ ಡೇಂಜರಸ್ ಬ್ಯಾಟ್ಸ್ಮನ್ ರಾಸ್ ಟೇಲರ್ಗೆ ಎಲ್ಬಲೆಗೆ ಕೆಡವಿದ್ರು. ನಂತರ ಡೆತ್ ಓವರ್ಗಳಲ್ಲಿ ತಂಡವನ್ನ ಗೆಲುವಿನತ್ತ ಕೊಂಡೋಯ್ಯುತ್ತಿದ್ದ ಸ್ಟ್ಯಾಂಟ್ನರ್ ಅವರನ್ನ ಚಾಣಾಕ್ಷತನದಿಂದ ಔಟ್ ಮಾಡಿ ಕಿವೀಸ್ಗೆ ಶಾಕ್ ಕೊಟ್ರು. ಹಾರ್ದಿಕ್ ಪಾಂಡ್ಯ ಒಟ್ಟು 8 ಓವರ್ ಬೌಲ್ ಮಾಡಿ 2 ವಿಕೆಟ್ ಪಡೆದ್ರು.
ತಲಾ ಒಂದು ವಿಕೆಟ್ ಪಡೆದ ಭುವಿ, ಜಾಧವ್
ಪಂದ್ಯದ ಆರಂಭದಲ್ಲಿ ವಿಕೆಟ್ ಪಡೆಯದೇ ನಿರಾಸೆ ಅನುಭವಿಸಿದ್ದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಡೆತ್ ಓವರ್ನಲ್ಲಿ ವಿಕೆಟ್ ಪಡೆದು ಮಿಂಚಿದ್ರು. ಇನ್ನು ಪಾರ್ಟ್ ಟೈಮ್ ಸ್ಪಿನ್ನರ್ ಕೇದಾರ್ ಜಾಧವ್ ಸಾಲಿಡ್ ಬ್ಯಾಟಿಂಗ್ ಮಾಡುತ್ತಿದ್ದ ಕ್ಯಾಪ್ಟನ್ ವಿಲಿಯಮ್ಸನ್ ವಿಕೆಟ್ ಪಡೆದು ಕಿವೀಸ್ ಹೆಡೆಮುರಿ ಮುರಿದಿದ್ರು.
ಒಟ್ಟಾರೆ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ಬೌಲರ್ಸ್ ಗಳು ಮತ್ತೊಮ್ಮೆ ಮ್ಯಾಚ್ ವಿನ್ನರ್ಗಳಾಗಿ ಹೊರ ಹೊಮ್ಮಿದ್ದು ತಂಡದ ದೃಷ್ಟಿಯಿಂದ ಒಳ್ಳೆಯದಾಗಿದೆ.