ವೆಲ್ಲಿಂಗ್ಟನ್: ವೆಲ್ಲಿಂಗ್ಟನ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ನ್ಯೂಜಿಲೆಂಡ್ಗೆ 253 ರನ್ಗಳ ಸವಾಲನ್ನ ನೀಡಿದೆ.
ಅಂಬಾಟಿ ರಾಯ್ಡು (90) ಅವರ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ 49.5 ಓವರ್ಗಳಲ್ಲಿ 252 ರನ್ಗಳಿಗೆಗೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಕ್ಕೆ
ನಾಯಕ ರೋಹಿತ್ ಶರ್ಮಾ(2) ಮತ್ತು ಶಿಖರ್ ಧವನ್ (6)ಅವರಿಂದ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್ (7)ಎರಡನೇ ಅವಕಾಶದಲ್ಲೂ ವಿಫಲರಾದರು.ಇನ್ನು ತಂಡದ ಮಿಸ್ಟರ್ ಕೂಲ್ ಧೋನಿ(1) ಕೂಡ ವಿಫಲರಾದ್ರು
ನಾಲ್ಕನೆ ವಿಕೆಟ್ಗೆ ಜೊತೆಗೂಡಿದ ಸ್ಫೋಟಕ ಬ್ಯಾಟ್ಸ್ಮನ್ ಅಂಬಾಟಿ ರಾಯ್ಡು ಮತ್ತು ಆಲ್ರೌಂಡರ್ ವಿಜಯ್ ಶಂಕರ್ ನಿಧಾನಗತಿಯ ಆಟವಾಡಿ ತಂಡವನ್ನ ಕಾಪಾಡಿದ್ರು. ಈ ಜೋಡಿ 98 ರನ್ಗಳ ಜೊತೆಯಾಟ ನೀಡಿತು. ವಿಜಯ್ ಶಂಕರ್ 45 ರನ್ಗಳಿಸಿದ್ದಾಗ ರನೌಟ್ ಬಲೆಗೆ ಬಿದ್ದರು. ನಂತರ ಕೇದಾರ್ಜಾಧವ್ (45), ಹಾರ್ದಿಕ್ ಪಾಂಡ್ಯ 45 ರನ್ಗಳಿಸಿದ್ರು. ಅಂಬಾಟಿ ರಾಯ್ಡು 90 ರನ್ಗಳಿಸಿದ್ದಾಗ ಹೆನ್ರಿ ವಿಕೆಟ್ ಒಪ್ಪಿಸಿ ಶತಕ ವಂಚಿತರಾದ್ರು.
ಕೊನೆಯಲ್ಲಿ ಬಂದ ಭುವನೇಶ್ವರ್ ಕುಮಾರ್ 6, ಮೊಹ್ಮದ್ ಶಮಿ 1 ರನ್ ಗಳಿಸಿದ್ರು. ನ್ಯುಜಿಲೆಂಡ್ ಪರ ಹೆನ್ರಿ 4 ಮತ್ತು ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದ್ರು.