ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಹಿನ್ನಲೆ ಪ್ರಾಂಶುಪಾಲರ ಬಂಧನ

ಹನೂರು, ಫೆ.3- ಶಾಲಾ ಮಕ್ಕಳ ಪ್ರವಾಸದ ವೇಳೆ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದಡಿ ಮೇಲಧಿಕಾರಿಗಳಿಗೆ ನೀಡಿದ ದೂರಿನನ್ವಯ ಪೆÇೀಕ್ಸೊ ಕಾಯ್ದೆಯಡಿ ಪ್ರಾಂಶುಪಾಲರ ವಿರುದ್ಧ ಹನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಹನೂರು ತಾಲ್ಲೂಕು ಮಂಗಲ ಗ್ರಾಮದ ಸಮೀಪವಿರುವ ಪರಿಶಿಷ್ಟ ವರ್ಗಗಳ ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಎಂಬಾತನೇ ಬಂಧಿತ ಆರೋಪಿ.

ಸಹಪಾಠಿ ಉಪನ್ಯಾಸಕಿಯ ಗೌಪ್ಯ ಪತ್ರ ಮಾಹಿತಿ ಆಧರಿಸಿ ದಿಟ್ಟ ನಿರ್ಧಾರ ತೆಗೆದುಕೊಂಡ ದಕ್ಷ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ.ಹರೀಶ್‍ಕುಮಾರ್‍ರವರ ನಿರ್ದೇಶನದಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪರವರ ಕರ್ತವ್ಯ ನಿಷ್ಟೆ ಮತ್ತು ದಿಟ್ಟ ಹೆಜ್ಜೆಯಿಂದ ಠಾಣೆಯಲ್ಲಿ ಪೆÇೀಕ್ಸೊ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಕಳೆದ ಒಂದು ತಿಂಗಳ ಹಿಂದೆ ಮಕ್ಕಳ ಶೈಕ್ಷಣಿಕ ಪ್ರವಾಸ ಕೈಗೊಂಡು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಪ್ರಾಂಶುಪಾಲ ಲೋಕೇಶ್ ಸಹ ಶಿಕ್ಷಕಿಯರು ಹೆಣ್ಣು ಮಕ್ಕಳ ಜತೆಗಿದ್ದರೂ ಹೆಣ್ಣು ಮಕ್ಕಳಿದ್ದ ಬಸ್‍ನಲ್ಲಿಯೇ ಪ್ರವಾಸ ಪ್ರಯಾಣ ಬೆಳೆಸಿದ್ದರಲ್ಲದೆ ಕೆಲವು ವಿದ್ಯಾರ್ಥಿನಿಯರ ಜತೆ ಅಸಭ್ಯತನದಿಂದ ವರ್ತಿಸಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯವೆಸಗಿರುವುದಲ್ಲದೆ ಇಲ್ಲಿ ನಡೆದಿರುವ ಘಟನೆಗಳು ಎಲ್ಲೂ ಬಾಯ್ಬಿಡದಂತೆ ಧಮಕಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಸ್ಟಾಪ್ ನರ್ಸ್ ಇದ್ದರೂ ಅನಾರೋಗ್ಯ ವಿದ್ಯಾರ್ಥಿನಿಗೆ ಯಾವುದೋ ಮಾತ್ರೆ ನೀಡಿರುವುದು.ಪ್ರವಾಸ ವೇಳೆ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯದ ಸಂಕ್ಷಿಪ್ತ ಘಟನೆ ಬಗ್ಗೆ ಉಪನ್ಯಾಸಕಿಯೊಬ್ಬರು ಮೇಲಾಧಿಕಾರಿಗಳಿಗೆ ಬರೆದ ಪತ್ರ ಆಧರಿಸಿ ಪ್ರಾಂಶುಪಾಲ ಲೋಕೇಶನನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ