ರಾಜಕೀಯಕ್ಕಾಗಿ ರಾಮನನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ; ಬಾಬಾ ರಾಮ್ ದೇವ್

ಮುಂಬೈ: ರಾಮನನ್ನು ರಾಜಕಿಯವಾಗಿ ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ರಾಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಎಲ್ಲರೂ ಸೇರಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು ಎಂದು ಯೋಗಗುರು ಬಾಬಾ ರಾಮ ದೇವ್ ತಿಳಿಸಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಅವರು, ರಾಮನು ಕೇವಲ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ರಾಮ ಇಡೀ ದೇಶಕ್ಕೆ ಸೇರಿದವನು. ಆದ್ದರಿಂದ ಎಲ್ಲಾ ಸಾಧು ಸಂತರು ಕೂಡ ಜೊತೆಗೂಡಿ ರಾಮನ ಮೇಲಿರುವ ಭಕ್ತಿಯನ್ನು ಸಾರಬೇಕು. ದೇಶಕ್ಕೆ ಯಾವುದೇ ತಪ್ಪು ಕಲ್ಪನೆ ನೀಡುವ ರೀತಿ ನಮ್ಮ ಭಕ್ತಿ ಇರಬಾರದು ಎಂದರು

ರಾಮನ ಹೆಸರನ್ನು ಬಳಸಿಕೊಂಡು ದೇಶವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ನಾನು ಎಲ್ಲಾ ಸನ್ಯಾಸಿಗಳು ಹಾಗೂ ಸಂತರ ಬಳಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

Ram doesn’t belong to any party, all saints must unite for the cause: Yoga guru Baba Ramdev

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ