ಪ್ರಿಯಾಂಕಾ ಗಾಂಧಿ ವಿರುದ್ಧ ಕೀಳುಮಟ್ಟದ ಹೇಳಿಕೆ: ದೇಶಾದ್ಯಂತ ಎಫ್‍ಐಆರ್

ನವದೆಹಲಿ: ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿರುವ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿದವರ ವಿರುದ್ಧ ಎಫ್‍ಐಆರ್ ದಾಖಲಾಗಲಿದೆ.

ದುರುದ್ದೇಶಪೂರಿತವಾಗಿ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿದವರ ಅವರ ವಿರುದ್ದ ದೇಶಾದ್ಯಂತ ಕಾಂಗ್ರೆಸ್ ಮಹಿಳಾ ಘಟಕ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್‍ಐಆರ್ ದಾಖಲಿಸಲಿದೆ ಎಂದು ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ರಾಜಕೀಯ ಪ್ರವೇಶಿಸುತ್ತಿರುವ ನಾಯಕಿಯರ ಬಗ್ಗೆ ನಮ್ಮ ದೇಶದಲ್ಲಿ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಹಲವು ಬಿಜೆಪಿ ನಾಯಕರು ಈಗಾಗಲೇ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ನಾನು ದೆಹಲಿಯಲ್ಲಿ ಎಫ್‍ಐಆರ್ ದಾಖಲಿಸುತ್ತಿದ್ದು, ರಾಜ್ಯ ಘಟಕ ಅಧ್ಯಕ್ಷರಿಗೆ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಸುಶ್ಮಿತಾ ದೇವ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು, ರಾಹುಲ್ ರಾವಣನಾದರೆ, ಅವರ ಸಹೋದರಿ ಪ್ರಿಯಾಂಕಾ ಶೂರ್ಪನಖಿ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮಚಂದ್ರನಿದ್ದಂತೆ. ಈ ಆಧುನಿಕ ರಾವಣ ನಮ್ಮ ರಾಮನ ವಿರುದ್ಧ ತನ್ನ ತಂಗಿಯನ್ನು ರಾಜಕೀಯ ಯುದ್ಧಕ್ಕೆ ಕಳುಹಿಸಿದ್ದಾರೆ. ಆದರೆ ರಾಮಾಯಣದಲ್ಲಿ ಯುದ್ಧಕ್ಕೆ ಮೊದಲು ರಾವಣ ತನ್ನ ತಂಗಿ ಶೂರ್ಪನಖಿಯನ್ನು ರಾಮನ ಬಳಿಗೆ ಕಳಿಸಿ ಅನುಭವಿಸಿದ ಅವಮಾನವನ್ನೇ ಈಗ ರಾಹುಲ್ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದರು.

Congress to lodge FIRs on Priyanka Gandhi insults

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ