ನನಗೇನಾದರೂ ಆದರೆ ಅದಕ್ಕೆ ಪ್ರಧಾನಿ ಮೋದಿಯೇ ಜವಾಬ್ದಾರಿ: ಅಣ್ಣಾ ಹಜಾರೆ

ಮುಂಬೈ: ಲೋಕಾಯುಕ್ತ ಹಾಗೂ ಲೋಕಪಾಲ್ ಗೆ ಆಗ್ರಹಿಸಿ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು, ತನ್ನ ಜೀವಕ್ಕೆ ಎನಾದರೂ ತೊಂದರೆಯಾದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ.

“ಲೋಕಪಾಲ” ವನ್ನು ಕೇಂದ್ರದಲ್ಲಿ ಹಾಗೂ “ಲೋಕಾಯುಕ್ತ” ವನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಜನವರಿ 30ರಿಂದ `ಜನ್ ಆಂದೋಲನ್ ಸತ್ಯಾಗ್ರಹ’ ವನ್ನು ಮಹಾರಾಷ್ಟ್ರದ ರಾಲೇಗನ್ ಸಿದ್ಧಿ ಗ್ರಾಮದಲ್ಲಿ ನಡೆಸುತ್ತಿದ್ದಾರೆ. ಈ ವೇಳೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರ ವಿರೋಧಿ ಇಲಾಖೆಯನ್ನು ಕಾರ್ಯರೋಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದರು. 2013ರಲ್ಲೇ ಲೋಕಪಾಲ್ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದ್ರೆ ಎನ್‍ಡಿಎ ಸರ್ಕಾರ ಮಾತ್ರ ಅದನ್ನ ಜಾರಿಗೆ ತರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಲೋಕಾಪಾಲ್ ಹಾಗೂ ಲೋಕಾಯುಕ್ತ ಕಾರ್ಯರೂಪಕ್ಕೆ ಬಂದರೆ ಮಂತ್ರಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಒಂದು ವೇಳೆ ಪ್ರಧಾನಿ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರೇ ಅವರ ವಿರುದ್ಧವು ಸಾರ್ವಜನಿಕರು ಸಾಕ್ಷಿ ನೀಡಬಹುದು. ಆದರಿಂದ ಯಾವ ಪಕ್ಷವು ಈ ಮಸೂದೆಯನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಎಂದರು.

PM Narendra Modi will be responsible if anything happens to me: Anna Hazare

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ