ಕಿವೀಸ್ ವಿರುದ್ಧ ನಾಲ್ಕನೆ ಏಕದಿನ ಪಂದ್ಯದಲ್ಲಿ ರೋಹಿತ್ ಪಡೆ ಮುಗ್ಗರಿಸಿ ಬಿದ್ದಿದೆ. ಸ್ವಿಂಗ್ ಪಿಚ್ನಿಂದ ಕೂಡಿದ್ದ ಹ್ಯಾಮಿಲ್ಟನ್ ಅಂಗಳದಲ್ಲಿ ರೋಹಿತ್ ಪಡೆ ಕಿವೀಸ್ ಬೌಲರ್ಗಳ ಕರಾರುವಕ್ ದಾಳಿಗೆ ಶರಣಾಯಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಟೀಂ ಇಂಡಿಯಾಕ್ಕೆ ಓಪನರ್ ಶಿಖರ್ ಧವನ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಇದರ ನಂತರ ಇಡೀ ತಂಡ ಪೆವಿಲಿಯನ್ ಪರೇಡ್ ನಡೆಸಿ ಅಲ್ಪ ಮೊತ್ತಕ್ಕೆ ಕುಸಿಯಿತು.
ಟೀಂ ಇಂಡಿಯಾಕ್ಕೆ ಶಾಕ್ ಕೊಟ್ಟ ವೇಗಿ ಟ್ರೆಂಟ್ ಬೌಲ್ಟ್
ಟಾಸ್ ಸೋತ ಹೊರತಾಗಿಯೂ ಬಿಗ್ ಟಾರ್ಗೆಟ್ ಕಲೆ ಹಾಕಬೇಕೆಂದು ಲೆಕ್ಕಾಚಾರ ಹಾಕಿಕೊಂಡು ಬಂದ ಟೀಂ ಇಂಡಿಯಾಗೆ ಐeಜಿಣ ಂಡಿm ಠಿಚಿಛಿeಡಿ ಟ್ರೆಂಟ್ ಬೌಲ್ಟ್ ಶಾಕ್ ಮೇಲೆ ಶಾಕ್ ಕೊಟ್ರು. ಆರನೇ ಓವರ್ನಲ್ಲಿ ದಾಳಿಗಿಳಿದ ಟ್ರೆಂಟ್ ಬೌಲ್ಟ್ 13 ರನ್ಗಳಿಸಿದ್ದ ಶಿಖರ್ ಧವನ್ ಅವರನ್ನ ಎಲ್ಬಿ ಬಲೆಗೆ ಬೀಳಿಸುವಲ್ಲಿ ಸಕ್ಸಸ್ ಕಂಡರು.
ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟುತ್ತಿದ್ದ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದ್ರು.
ಶುಭಾರಂಭ ಮಾಡಲಿಲ್ಲ ಶುಭಮನ್ ಗಿಲ್
ಅಂಡರ್ 19, ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಸಾಲಿಡ್ ಪರ್ಫಾಮನ್ಸ್ ಕೊಟ್ಟಿದ್ದ ಯಂಗ್ ಪಂಜಾಬ್ ಬ್ಯಾಟ್ಸ್ಮನ್ ಶುಭಮನ್ ಗಿಲ್ ತಮ್ಮ ಡೆಬ್ಯೂ ಪಂದ್ಯದಲ್ಲಿ ಶುಭಾರಂಭ ಮಾಡಲಿಲ್ಲ. 9 ರನ್ ಗಳಿಸಿದ್ದಾಗ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದ್ರು.
ಇದಾದ ನಂತರ ಲೋ ಆರ್ಡರ್ನಲ್ಲಿ ಬಂದ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯಗೂ ಬೇಗನೆ ಪೆವಿಲಿಯನ್ ದಾರಿ ತೋರಿಸಿ ವೇಗಿ ಟ್ರೆಂಟ್ ಬೌಲ್ಟ್ ಒಟ್ಟು ಐದು ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾಗಿ ಹೊರ ಹೊಮ್ಮಿದ್ರು.
ಟ್ರೆಂಟ್ ಬೌಲ್ಟ್ ಸಾಧೆನೆ
ಓವರ್ : 10
ಮೇಡನ್ : 4
ವಿಕೆಟ್ : 5
ರನ್ : 21
ಎಕಾನಾಮಿ ರೇಟ್ : 2.10
ಹತ್ತು ಓವರ್ ಬೌಲಿಂಗ್ ಮಾಡಿದ ಟ್ರೆಂಟ್ ಬೌಲ್ಟ್ ನಾಲ್ಕು ಓವರ್ ಮೇಡನ್ ಮಾಡಿ ಐದು ವಿಕೆಟ್ ಪಡೆದರು. ಕೇವಲ 21 ರನ್ ಕೊಟ್ಟು 2.10 ಎಕನಾಮಿ ರೇಟ್ ಹೊಂದಿದ್ರು.
ಮೂರು ವಿಕೆಟ್ ಪಡೆದು ಗ್ರ್ಯಾಂಡ್ಹೋಮ್ ಗ್ರ್ಯಾಂಡ್ ಸೆಲೆಬ್ರೇಷನ್
ವೇಗಿ ಟ್ರೆಂಟ್ ಬೌಲ್ಟ್ ಮಾತ್ರ ಅಲ್ಲ ಕಿವೀಸ್ ತಂಡದ ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್ ಹೋಮ್ ಕೂಡ ಸೂಪರ್ ಸ್ಪೆಲ್ ಮಾಡಿ ಶೈನ್ ಆದ್ರು. ಟ್ರೆಂಟ್ ಬೌಲ್ಟ್ ಆರಂಭಿಕ ಆಘಾತ ಕೊಟ್ರೆ. ಗ್ರಾಂಡ್ ಹೋಮ್ ರೋಹಿತ್ ಪಡೆಯ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್ನ್ನ ಬುಡಮೇಲು ಮಾಡಿದ್ರು. ಹನ್ನೊಂದನೇ ಓವರ್ನಲ್ಲಿ ದಾಳಿಗಿಳಿದ ಗ್ರಾಂಡ್ ಹೋಮ್ ಅಂಬಾಟಿ ರಾಯ್ಡು ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಪಡೆದು ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್ನ್ನ ಉಡೀಸ್ ಮಾಡಿದ್ರು. ನಂತರ ಭುವನೇಶ್ವರ್ ಕುಮಾರ್ ವಿಕೆಟ್ ಪಡೆದು ಒಟ್ಟು 3 ವಿಕೆಟ್ ಪಡೆದರು.
ಒಟ್ನಲ್ಲಿ ಟೀಂ ಇಂಡಿಯಾ ಹ್ಯಾಮಿಲ್ಟನ್ನಲ್ಲಿ ಮುಗ್ಗರಿಸಿ ಬೀಳಲು ಟ್ರೆಂಟ್ ಬೌಲ್ಟ ಮತ್ತು ಆಲ್ರೌಂಡರ್ ಗ್ರಾಂಡ್ ಹೋಮ್ ಕಾರಣರಾದ್ರು.