ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಿದ್ದು, ರೈತ ಕಾರ್ಮಿಕ ವರ್ಗಕ್ಕೆ ಅನೇಕ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆ ಮಾಹಿತಿ ಇಲ್ಲಿದೆ.
*ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ.
*ಇಎಸ್ ಐ ಆದಾಯ ಮಿತಿ ಏರಿಕೆ, 15 ಸಾವಿರದಿಂದ 21ಸಾವಿರಕ್ಕೆ ಮಿತಿ ಏರಿಕೆ. ಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ, ಮೀನುಗಾರರು, ಪಶುಸಂಗೋಪನಾ ಕ್ಷೇತ್ರದವರಿಗೆ ಶೇ.2ರಷ್ಟು ಬಡ್ಡಿ ವಿನಾಯಿತಿ.
*ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. 21 ಸಾವಿರ ರೂಪಾಯಿ ಸಂಬಳ ಪಡೆಯುವವರಿಗೆ ಇಎಸ್ ಐ ಯೋಜನೆ.
*ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾನುಧೇನು ಆಯೋಗ ರಚಿಸಿದ ಕೇಂದ್ರ. ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ.
*5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ರೈತರ ಅಕೌಂಟ್ ಗೆ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿ.
*ರೈತರ ಅಕೌಂಟ್ ಗೆ ಎರಡು ಸಾವಿರ ರೂಪಾಯಿ ಹಣ, ದೇಶದ ರೈತರ ಖಾತೆಗೆ ಆರು ಸಾವಿರ ರೂಪಾಯಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ.
*ಸಣ್ಣ ಹಿಡುವಳಿದಾರರಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿ ನೇರ ನಗದು ಎಂದು ಬಂಪರ್ ಘೋಷಿಸಿದೆ. ಕೃಷಿ ಕ್ಷೇತ್ರದಲ್ಲಿ ಎನ್ ಡಿಎ ಸರ್ಕಾರ ಮಹತ್ವದ ಸುಧಾರಣೆ ತಂದಿದೆ.
*5 ವರ್ಷದಲ್ಲಿ ಭಾರತಕ್ಕೆ 230 ಶತಕೋಟಿ ಡಾಲರ್ ಎಫ್ ಡಿಐ ಬಂದಿದೆ. ರೇರಾ ಕಾಯ್ದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾರದರ್ಶಕತೆ ತಂದಿದೆ. ಗ್ರಾಮೀಣ ನೈರ್ಮಲ್ಯಕರಣದಲ್ಲಿ ಶೇ.98ರಷ್ಟು ಸಾಧನೆ.
*ಜಿಎಸ್ ಟಿಯಂತಹ ಐತಿಹಾಸಿಕ ಸುಧಾರಣೆ ಜಾರಿಗೆ ತಂದಿದ್ದೇವೆ. ಆಯುಷ್ಮಾನ್ ಭಾರತ ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ.
*ಆಯುಷ್ಮಾನ್ ಯೋಜನೆಯಿಂದ 50 ಕೋಟಿ ಜನರಿಗೆ ಲಾಭವಾಗಲಿದೆ. 5 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಹೂಡಿಕೆ.
*ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಅವಧಿಯಲ್ಲಿ ಗೃಹ ನಿರ್ಮಾಣ 5 ಪಟ್ಟು ಹೆಚ್ಚಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ಮೀಸಲು.
*ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು, ಗ್ರಾಮೀಣ ರಸ್ತೆಯ ನಿರ್ಮಾಣ ಮೂರು ಪಟ್ಟು ಹೆಚ್ಚಾಗಿದೆ.
*2018ರ ಡಿಸೆಂಬರ್ ನಲ್ಲಿ ಹಣದುಬ್ಬರದ ದರ ಕೇವಲ ಶೇ.2.1ರಷ್ಟಿತ್ತು. 2019ರಲ್ಲಿ ಕೈಗೊಂಡಿರುವ ಸ್ವಚ್ಛ ಭಾರತ್ ಮಿಷನ್ ಬಹುತೇಕ ಯಶಸ್ವಿ. ಆರ್ಥಿಕ ಶಿಸ್ತು ಕಾಪಾಡುವಲ್ಲಿ ಎನ್ ಡಿಎ ಸರ್ಕಾರ ಸಫಲವಾಗಿದೆ.
*ಭ್ರಷ್ಟಾಚಾರ ಮುಕ್ತ ನಮ್ಮ ಸರ್ಕಾರದ ಸಾಧನೆ. ದೇಶಕ್ಕೆ ಗ್ರಹಣ ಹಿಡಿಸಿದ್ದ ನೀತಿಗಳನ್ನು ತೊಡೆದು ಹಾಕಿದ್ದೇವೆ. 2018-19ರ ಪರಿಷ್ಕೃತ ಅಂದಾಜಿನಂತೆ ವಿತ್ತೀಯ ಕೊರತೆ ಶೇ.3.4ಕ್ಕೆ ಇಳಿಕೆ
*ಬೆಲೆ ಏರಿಕೆ ನಿಯಂತ್ರಣಕ್ಕೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ.
*ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಆರಂಭಿಸಿದ್ದ ಎಲ್ಲಾ ಯೋಜನೆಗಳು ಪೂರ್ಣಗೊಂಡಿದೆ. ಎನ್ ಪಿಎ ಹಗರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು ನಮ್ಮ ಹೆಮ್ಮೆ.
*ದೇಶದ ಜನತೆ ನಮ್ಮ ಸರ್ಕಾರಕ್ಕೆ ಬಲಿಷ್ಠವಾದ ಜನಾದೇಶವನ್ನು ಕೊಟ್ಟಿದ್ದಾರೆ. ಸ್ಥಿರ ಸರ್ಕಾರ ನೀಡುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ನಾವು ನಿರ್ಣಾಯಕರಾಗಿದ್ದೇವೆ.
*ಹಣದುಬ್ಬರ ದರ ನಿಯಂತ್ರಣ ಮಾಡಿದ್ದೇವೆ. ಕಳೆದ ಸರ್ಕಾರಗಳಿಗೆ ಹೋಲಿಸಿದರೆ ನಾವು ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ.
*ಕಳೆದ 5 ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದೇವೆ.
*ಭಯೋತ್ಪಾದನೆ, ಜಾತಿವಾದವನ್ನು ನಿಯಂತ್ರಿಸಿದ್ದೇವೆ. ಜನರ ಶ್ರೇಯೋಭಿವೃದ್ದಿಗೆ ಎಲ್ಲಾ ರೀತಿಯ ಯೋಜನೆ ನೀಡಿದ್ದೇವೆ. ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಹೊಂದಿದ್ದೇವೆ.
*ಷೇರು ಪೇಟೆ ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯ ಹೆಚ್ಚಳ, ಷೇರುಪೇಟೆ ಕೂಡಾ ಯಥಾಸ್ಥಿತಿ ಕಾಪಾಡಿಕೊಂಡಿದೆ.