ಫೀಲ್ಡಿಂಗ್ ನಲ್ಲಿ ಇಂಪ್ರೆಸ್ ಮಾಡಿದ ಟೀಂ ಇಂಡಿಯಾ

ಟೀಂ ಇಂಡಿಯಾ ಹೋದಲೆಲ್ಲ  ಶಾಂಧಾರ್  ಪರ್ಫಾಮನ್ಸ್  ಕೊಟ್ಟು   ಶೈನ್  ಆಗ್ತಿದೆ.  ಇದಕ್ಕೆ ಕಾರಣ  ಬ್ಲೂ  ಬಾಯ್ಸ್  ಎಲ್ಲ  ಡಿಪಾರ್ಟ್ಮೆಂಟ್ನಲ್ಲಿ  ಕೊಡುತ್ತಿರುವ  ಸಾಲಿಡ್ ಪರ್ಫಾಮನ್ಸ್  ಕಾರಣ.

ಟೀಂ ಇಂಡಿಯಾ ಆಟಗಾರರ ಸಕ್ಸಸ್  ಹಿಂದೆ  ಫಿಟ್ನೆಸ್  ಇದೆ.   ಆಟಗಾರು  ಜಬರ್ದಸ್ತ್  ಪರ್ಫಾಮನ್ಸ್  ಕೊಡುವ ಹಿಂದೆ  ತಂಡದ  ಕೋಚ್ಗಳ  ಸಹಾಯವಿದೆ.  ಅದರಲ್ಲೂ  ತಂಡದ  ಫೀಲ್ಡಿಂಗ್  ಡಿಪಾರ್ಟ್ಮೆಂಟ್  ಈಗ  ಎಲ್ಲರನ್ನ  ಇಂಪ್ರೆಸ್  ಮಾಡಿದೆ.

ಸ್ಟನ್ನಿಂಗ್  ಕ್ಯಾಚ್ ಹಿಡಿದ  ಹಾರ್ದಿಕ್  ಪಾಂಡ್ಯ

ಟೀಂ ಇಂಡಿಯಾ  ಫೀಲ್ಡಿಂಗ್  ಬಗ್ಗೆ ಮಾತನಾಡಲು ಒಂದು  ಕಾರಣವಿದೆ.  ಮೊನ್ನೆ  ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  ಹಾರ್ದಿಕ್  ಪಾಂಡ್ಯ  ಮಿಡ್ವಿಕೆಟ್ನಲ್ಲಿ  ಕಿವೀಸ್ ನಾಯಕ  ಕೇನ್  ವಿಲಿಯಮ್ಸ್  ನೀಡಿದ್ದ ಕ್ಯಾಚ್ನ್ನ  ಆಕರ್ಷಕವಾಗಿ ಕ್ಯಾಚ್ ಹಿಡಿದು ಎಲ್ಲರನ್ನ ಇಂಪ್ರೆಸ್ ಮಾಡಿದ್ದಾರೆ.

ವರ್ಷಗಳ  ಹಿಂದೆ  ಟೀಂ  ಇಂಡಿಯಾ  ಫೀಲ್ಡಿಂಗ್  ಅಂದ್ರೆ ಅಷ್ಟಕಷ್ಟೆ  ಎನ್ನುವಂತಿತ್ತು.   ಅದರಲ್ಲೂ  ವಿಧೇಶದಲ್ಲಿ  ಟೀಂ ಇಂಡಿಯಾ ಆಟಗಾರರ  ಫೀಲ್ಡಿಂಗ್  ತುಂಬ  ಕಳಪೆಯಾಗಿರುತ್ತಿತ್ತು. ಇದರ ಪರಿಣಾಮವೇ  ಅದೆಷ್ಟೊ  ಪಂದ್ಯಗಳನ್ನ  ಕೈಚೆಲ್ಲಿಕೊಂಡ  ಉದಾಹರಣಗಳು ಇವೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ  ಕ್ಯಾಚ್  ಕೈಚೆಲ್ಲಿ  ಸರಣಿ  ಕಳೆದುಕೊಂಡಿದ್ದ ಟೀಂ ಇಂಡಿಯಾ

ಕಳೆದ  ವರ್ಷ  ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು.  ಮೂರು  ಟೆಸ್ಟ್ ಪಂದ್ಯಗಳ  ಸರಣಿಯಲ್ಲಿ  ಟೀಂ ಇಂಡಿಯಾಕ್ಕೆ  ಐತಿಹಾಸಿಕ  ಟೆಸ್ಟ್  ಸರಣಿ  ಗೆಲ್ಲಲು  ಅವಕಾವಿತ್ತು.  ಆದರೆ  ತಂಡದ  ಫೀಲ್ಡರ್ಗಳು  ಫೀಲ್ಡಿಂಗ್ನಲ್ಲಿ  ಮಾಡಿದ  ಕೆಲವು ಯಡವಟ್ಟುಗಳಿಂದ  ಸರಣಿಯನ್ನ  ಕೈಚೆಲ್ಲಿ ಕೊಳ್ಳಬೇಕಾಯಿತು.

ಫೀಲ್ಡಿಂಗ್ನಲ್ಲಿ  ಬೊಂಬಾಟ್  ಪರ್ಫಾಮನ್ಸ್  ಕೊಡುತ್ತಿದ್ದಾರೆ  ಕೊಹ್ಲಿ ಬಾಯ್ಸ್

ಈಗ ಟೀಂ ಇಂಡಿಯಾದ  ಜಮಾನ  ಬದಲಾಗಿದೆ. ಕೊಹ್ಲಿ  ಬಾಯ್ಸ್  ಫೀಲ್ಡಿಂಗ್ ನಲ್ಲಿ  ಎಲ್ಲರೂ  ಬೆರಗುಗಣ್ಣಿನಿಂದ  ನೋಡುವಂತೆ ಮಾಡಿದ್ದಾರೆ.  ಇತ್ತಿಚೆಗೆ  ಆಸ್ಟ್ರೇಲಿಯಾ ಮತ್ತು  ಕಿವೀಸ್  ವಿರುದ್ಧ  ನೀಡಿರುವ  ಸಾಲಿಡ್  ಫೀಲ್ಡಿಂಗ್ ಕಾರಣ.  ಛಿಚಿಣಛಿhes ತಿiಟಿ ಒಚಿಣಛಿhes ಅಂತಾರೆ ಈ ಮಾತು  ಅಕ್ಷರಶಃ ಟೀಂ ಇಂಡಿಯಾಕ್ಕೆ  ಅರ್ಥವಾಗಿದೆ.

14 ಕ್ಯಾಚ್  ಹಿಡಿದು ವಿಶ್ವ  ದಾಖಲೆ ಬರೆದಿದ್ದ  ಕನ್ನಡಿಗ ರಾಹುಲ್ 

ಕಳೆದ  ವರ್ಷ  ಟೀಂ ಇಂಡಿಯಾ  ಇಂಗ್ಲೆಂಡ್  ಪ್ರವಾಸ ಕೈಗೊಂಡಿತ್ತು.  ಐದು ಟೆಸ್ಟ್  ಪಂದ್ಯಗಳ  ಸರಣಿಯಲ್ಲಿ   ಟೀಂ ಇಂಡಿಯಾ ಸರಣಿಯಲ್ಲಿ  ಸೋಲು ಕಂಡರೂ  ತಂಡದ ಫೀಲ್ಡಿಂಗ್  ಗಮನ ಸೆಳೆಯಿತು. ಕನ್ನಡಿಗ  ಕೆ.ಎಲ್. ರಾಹುಲ್  ಒಟ್ಟು  14  ಕ್ಯಾಚ್ಗಳನ್ನ  ಹಿಡಿದು  ಆಂಗ್ಲರ  ನಾಡಲ್ಲಿ  ವಿಶ್ವ ದಾಖಲೆ ಬರೆದ್ರು.

ಟೀಂ ಇಂಡಿಯಾ  ಫೀಲ್ಡಿಂಗ್ ಸಕ್ಸಸ್  ಹಿಂದಿದ್ದಾನೆ  ತಂಡದ ಹೊಸ  ಸದಸ್ಯ 

ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ ನಲ್ಲಿ  ಈ ಪಾಟಿ ಸಕ್ಸಸ್  ಕಾಣಲು  ಆತನೇ  ಕಾರಣ. ಆತ  ತಂಡಕ್ಕೆ  ಹೊಸದಾಗಿ ಸೇರ್ಪಡೆಯಾಗಿದ್ದಾನೆ. ಅಷ್ಟಕ್ಕೂ  ಆತ ವೇರೆ ಯಾರು ಅಲ್ಲ    ಡ್ರಿಲಿಂಗ್  ಅಸಿಸ್ಟೆಂಟ್.  ಈ  ಡ್ರಿಲಿಂಗ್  ಅಸಿಸ್ಟೆಂಟ್  ಬಂದ ನಂತರ  ತಂಡದ ಫೀಲ್ಡಿಂಗ್  ಸಮಸ್ಯೆ  ಬಹುತೇಕ ಬದಲಾಗಿ ಹೋಗಿದೆ.

ಒಟ್ಟಾರೆ  ವಿಶ್ವಕಪ್ಗೂ  ಮುನ್ನ  ತಂಡದ  ಸಮಸ್ಯೆಗಳಲ್ಲಿ  ಒಂದಾದಗಿದ್ದ  ಫೀಲ್ಡಿಂಗ್ ಸಮಸ್ಯೆಯನ್ನ  ಬಗೆ ಹರಿಸಿಕೊಂಡಿದ್ದು  ತಂಡದ ಆಟಗಾರರು  ವಿಶ್ವಕಪ್ನಲ್ಲೂ ಇದೇ ಪರ್ಫಾಮನ್ಸ್ನ್ನ  ಮುದುವರೆಸಬೇಕಿದೆ.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ