ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ: ಸಂಸತ್ ಜಂಟಿ ಅಧಿವೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: 16ನೇ ಲೋಕಸಭೆಯ ಕೊನೆಯ ಸಂಸತ್ ಅಧಿವೇಶನ ಆರಂಭವಾಗಿದ್ದು, ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ರಾಷ್ತ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಎನ್ ಡಿಎ ಸರ್ಕಾರದ ಸಾಧನೆಗಳು ಹಾಗೂ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು.

ಜಂಟಿ ಅಧಿವೇಶನದ ಭಾಷಣಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಎಂದಿನ ಸಂಪ್ರದಾಯದಂತೆ ಅಶ್ವದಳದ ಸಾರೋಟ್​ನಲ್ಲಿ ಸಂಸತ್​ ಭವನಕ್ಕೆ ಆಗಮಿಸಿದರು. ಅವರಿಗೆ ಅಶ್ವದಳದ ಮೂಲಕ ವೈಭವಯುತವಾಗಿ ಗೌರವ ವಂದನೆ ಸಲ್ಲಿಸು ಮೂಲಕ ಸಂಸತ್​ ಭವನಕ್ಕೆ ಸ್ವಾಗತಿಸಲಾಯಿತು.

ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು. ಫೆಬ್ರವರಿ 13ರಂದು ಮುಕ್ತಾಯವಾಗಲಿದೆ. ನಾಳೆ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರು 2019-20ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಭಾಷಣ ಮಾಡಿದರು.

ಸಾಮಾಜಿಕ ನ್ಯಾಯ, ದೇಶದ ಅಭಿವೃದ್ಧಿ ನಮ್ಮ ಆದ್ಯತೆ. ನಮ್ಮ ಸರ್ಕಾರ ಬಡವರು, ರೈತರು, ಶೋಷಿತರ ಪರವಾಗಿದೆ. ದೇಶದಲ್ಲಿ 9 ಕೋಟಿ ಶೌಚಾಲಯ ನಿರ್ಮಾಣ, 13 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ವಿತರಣೆ ಮಾಡಿದ್ದೇವೆ.

ದೇಶದ ಎಲ್ಲಾ ಗ್ರಾಂ.ಪಂ ಗಳಿಗೂ ಒಎಫ್ ಸಿ ವ್ಯವಸ್ಥೆ ಮಾಡಲಾಗಿದ್ದು, ೪೦ಸಾವಿರ ಗ್ರಾಮಗಳಿಗೆ ವೈಫೈ, ಹಾಟ್ ಸ್ಪಾಟ್ ಸಂಪರ್ಕ ಕಲ್ಪಿಸಲಾಗಿದೆ.

ದಯೆಯೇ ಧರ್ಮದ ಮೂಲವೆಂದು ಉಲ್ಲೇಖ. ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ

ಆಯುಷ್ಮಾನ್ ಯೋಜನೆ ಎಲ್ಲ ಬಡವರಿಗೂ ತಲುಪಿದೆ.

600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಔಷ ಧ ಕೇಂದ್ರ ತೆರೆಯಲಾಗಿದೆ.

ದಿವ್ಯಾಂಗರಿಗೆ ವೀಲ್ ಚೇರ್ ಸೇರಿ ಹಲವು ವಸ್ತುಗಳ ವಿತರಣೆ.

ಮಾನವ ರಹಿತ ರೈಲ್ವೆ ಕ್ರಾಸಿಂಗ ನಿರ್ಮಾಣಕ್ಕೆ ಕ್ರಮ

ರೈಲ್ವೆ, ಬಸ್ ನಿಲ್ದಾಣದಲ್ಲಿ ದಿವ್ಯಾಂಗರಿಗೆ ವಿಶೇಷ ಸೌಲಭ್ಯ

ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಎಲ್ಲರಿಗೂ ಮನೆ ನಿರ್ಮಿಸಿಕೊಡುವುದು ಸರ್ಕಾರದ ಗುರಿ.

ನಮ್ಮ ಸರ್ಕಾರ ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿದೆ.

ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ ನೀಡಿದ್ದು, ಮುಸ್ಲೀಂ ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಕ್ ಮಸೂದೆ ಜಾರಿಗೆ ತರಲಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಹೆಚ್ಚಳ ಮಾಡಿದ್ದೇವೆ.

ದೇಶದಲ್ಲಿ 7ಐಐಟಿ, 7 ಐಐಅಎಂ ಸ್ಥಾಪಿಸಲಾಗಿದೆ.

ದೇಶದಲ್ಲಿ ಕೃಷಿ ವಿಜ್ನಾನ ಹೆಚ್ಚಿಸಿದ್ದೇವೆ. ಸಣ್ಣ ನೀರಾವರಿಗೂ ಆದ್ಯತೆ ನೀಡಲಾಗಿದೆ.

ನಮ್ಮ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿದೆ.

ದೇಶದಲ್ಲಿ ಕೃಷಿ ವಿಜ್ನಾನ ಕೇಂದ್ರ ಹೆಚ್ಚಿಸಿದ್ದೇವೆ.

17 ಸಾವಿರ ಮಣ್ಣು ಪರೀಕ್ಷಾ ಕಾರ್ಡ್ ವಿತರಣೆ ಮಾಡಲಾಗಿದೆ. 22 ಬೆಳೆಗಳ ಎಂ ಎಸ್ ಪಿ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ.

ಬೆಳೆ ವಿಮೆ ಯೋಜನೆಯಲ್ಲಿ ಪ್ರೀಮಿಯಂ ದರದಲ್ಲಿ ಕಡಿತ.

ದೇಶದಲ್ಲಿ 34 ಕೋಟಿ ಜನ ಬ್ಯಾಂಕ್ ಖಾತೆ ತೆರೆದಿದ್ದಾರೆ.

7 ಕೋಟಿಗೂ ಅಧಿಕ ಜನರಿಗೆ ರುಪೇ ಕಾರ್ಡ್ ವಿತರಿಸಲಾಗಿದೆ.

ಕಪ್ಪುಹಣ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸರಿಕಾರದಿಂದ ಕ್ರಮಕೈಗೊಂದಿದ್ದೇವೆ.

ಪ್ರತಿ ಪೈಸೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸುತ್ತೇವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಗಳು ಆಧುನಿಕರಣಗೊಳ್ಳುತ್ತಿದೆ.

ಉಡಾಣ್ ಯೋಜನೆಯಿಂದಾಗಿ ವಿಮಾನಗಳ ಅಭಿವೃದ್ಧಿ ಮಾಡಲಾಗುತ್ತಿದೆ.

ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ.

Budget Session Of Parliament Begins, President Addressed Both Houses

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ