ಬೆಂಗಳೂರು: ಹೌದು ನಾನು ರಾಜೀನಾಮೆ ನೀಡ್ತೇನಿ ಎಂದಿದ್ದು ನಿಜ ಎಂದು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರು ನನ್ನ ವಿರುದ್ಧ ಮಾತನಾಡಿದ್ದರು. ಹೀಗಾಗಿ ಅನಿವಾರ್ಯವಾಗಿ ನಾನು ಹಾಗೆ ಹೇಳಬೇಕಾಯಿತು.
ನಿನ್ನೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ನಿಮಗೆಲ್ಲ ಹೇಳುತ್ತಿದ್ದೇನೆ. ರಾಜ್ಯದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಮಾತನ್ನಾಡಬೇಕಾಯಿತು. ಕೆಲವರ ಹೇಳಿಕೆ ನೋವು ತಂದಿದ್ದು ನಿಜ ಎಂದು ಅವರು ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಅವರು, ಪ್ರಧಾನಿ ಹುದ್ದೆಯನ್ನ ಬಿಟ್ಟು ಬಂದ ನಮ್ಮ ಕುಟುಂಬಕ್ಕೆ ಸಿಎಂ ಸ್ಥಾನ ಬಿಟ್ಟುಕೊಡುವುದು ದೊಡ್ಡದೇನಲ್ಲ ಎಂದು ಕಾಂಗ್ರೆಸ್ ಹಾಗೂ ವಿರೋಧಿಗಳಿಗೆ ಸಿಎಂ ಭರ್ಜರಿ ಟಾಂಗ್ ಕೊಟ್ಟಿದ್ದರು.