ಭೋಪಾಲ್, ಜ.28- ಭಾರತದ ಅತ್ಯಂತ ಪ್ರಸಿದ್ಧ ಹುಲಿ ಮಚ್ಲಿ ನಿಧನದ ಬಳಿಕ ಅದರ ಸ್ಥಾನ ತುಂಬುತ್ತಿರುವ ಮಧ್ಯಪ್ರದೇಶದ 13 ವರ್ಷದ ಕಾಲರ್ ವಾಲಿ ಎಂಬ ವ್ಯಾಘ್ರಿಣಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಕಾಲರ್ ವಾಲಿ ಹುಲಿ ನಾಲ್ಕು ಹೆಣ್ಣು ಹುಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಒಟ್ಟಾರೆ 29 ಹುಲಿ ಮರಿಗಳ ತಾಯಿ ಎಂಬ ವಿನೂತನ ದಾಖಲೆಯನ್ನು ಬರೆದಿದೆ. ಪಿಟಿಆರ್ ಕ್ಷೇತ್ರ ನಿರ್ದೇಶಕ ವಿಕ್ರಂ ಸಿಂಗ್ ಪರಿಹಾರ್ ಹೇಳಿದ್ದಾರೆ.
ರಾಯಲ್ ಬೆಂಗಲ್ ಹುಲಿ ಟಿ-15 ಎಂಬ ಹೆಸರು ಇದ್ದರೂ ಕಾಲರ್ ವಾಲಿ (ಕೊರಳ ಪಟ್ಟಿ ಇರುವ) ಹುಲಿ ಎಂದೇ ಜನಪ್ರಿಯವಾಗಿದೆ. 2008ರಿಂದ ಏಳು ಪ್ರತ್ಯೇಕ ಹೆರಿಗೆಗಳಲ್ಲಿ ಒಟ್ಟು 25 ಹುಲಿ ಮರಿಗಳನ್ನು ಹಾಕಿತ್ತು. ಇದೀಗ ಮತ್ತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಮಧ್ಯಪ್ರದೇಶದ ಸಿಯೋನಿ ಮತ್ತು ಚಿಂಡ್ವಾರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಿಟಿಆರ್ ಹುಲಿಧಾಮದಲ್ಲಿ 49 ಹುಲಿಗಳಿದ್ದು ಅವುಗಳಲ್ಲಿ ಕಾಲರ್ ವಾಲಿ ಹುಲಿ ಎಲ್ಲರ ಗಮನ ಸೆಳೆಯುತ್ತಿದೆ.