ಮಧುರೈ : ಮಧುರೈ ಏಮ್ಸ್ ಆಸ್ಪತ್ರೆಯ ಉದ್ಘಾಟನೆ ವೇಳೆ ‘ಮುದ್ರಾ’ ಯೋಜನೆಯ ಫಲಾನುಭವಿ ಅರುಳ್ಮೋಳಿ ಸರವಣನ್ ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ.
ಅರುಳ್ಮೋಳಿ ಸರವಣನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೊಜನೆಯ ಸಹಕಾರದಿಂದ ಥರ್ಮೋಫ್ಲಾಸ್ಕ್ ಉದ್ಯಮದಲ್ಲಿ ಯಶಸ್ವಿಯಾಗಿ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದಾರೆ.
2017ರಲ್ಲಿ ಸರ್ಕಾದ ಇ-ಮಾರುಕಟ್ಟೆಯ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಥರ್ಮೋಫ್ಲಾಸ್ಕ್ ಅಗತ್ಯವನ್ನು ಅರಿತ ಅರುಳ್ಮೋಳಿ ಸರವಣನ್, ಕೆಲ ಥರ್ಮೋಫ್ಲಾಸ್ಕ್ಗಳನ್ನು ಕಳಿಸಿದ್ದರು. ಆನಂತರ ಫ್ಲಾಸ್ಕ್ಗಳ ಗುಣಮಟ್ಟದಿಂದ ಸಂತುಷ್ಟವಾದ ಕಾರ್ಯಾಲಯ ಮತ್ತಷ್ಟು ಫ್ಲಾಸ್ಕ್ ಕಳಿಸುವಂತೆ ಮನವಿ ಮಾಡಿತ್ತು. ಈ ಕುರಿತು ಅರುಳ್ಮೋಳಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಈ ಸಂಗತಿಯನ್ನು ‘ಮೋದಿ ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ಥಾಪಿಸಿದ್ದರು. ಇತ್ತೀಚಿಗೆ ಅರುಳ್ಮೋಳಿ, ಮತ್ತೊಮ್ಮೆ ಮೋದಿಗೆ ಪತ್ರ ಬರೆದು ಉದ್ಯಮದ ಕುರಿತು ವಿವರಿಸಿದ್ದರು.
ಕೇವಲ 234ರೂ ವ್ಯಯಿಸಿ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿದ ಅರುಳ್ಮೋಳಿ, ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಇದಕ್ಕೆಲ್ಲ ಕೇಂದ್ರ ಸರ್ಕಾರದ ಪ್ರೋತ್ಸಾಹವೇ ಕಾರಣ ಎಂದು ಕೊಂಡಾಡಿದ್ದಾರೆ