ತುಮಕೂರು, ಜ.28- ಕಡೆಗೂ ತುಮಕೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ.
ಮಹಾನಗರ ಪಾಲಿಕೆಯ ಚುನಾವಣೆ ನಂತರ ಮೇಯರ್, ಉಪ ಮೇಯರ್ ಅವರ ಮೀಸಲಾತಿ ನಿಗದಿಪಡಿಸಲು ಭಾರೀ ಮೀನಾ ಮೇಷ ಎಣಿಸಿತ್ತು. ಕಾರಣ ರಾಜ್ಯ ಸರ್ಕಾರ ತಮ್ಮ ಬೆಂಬಲಿಗರಿಗೆ ಅಧಿಕಾರ ಸಿಗುವಂತೆ ನೋಡಿಕೊಳ್ಳುವುದು ಹಾಗೂ ಮೀಸಲಾತಿ ಬದಲಾವಣೆ ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ ಮೈಸೂರು, ತುಮಕೂರು ಕೆಲವರು ಹೈಕೋರ್ಟ್ ಮೊರೆ ಹೋದರೂ ಮೀಸಲಾತಿ ಮನಸೋ ಇಚ್ಛೆ ಮಾಡಿದ್ದಾರೆ. ಇದನ್ನು ಸರಿಪಡಿಸಬೇಕು ಇದರಲ್ಲಿ ಭಾರೀ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪು ಬರುವುದು ವಿಳಂಬವಾಗಿತ್ತು.
ತುಮಕೂರು, ಮೈಸೂರು, ಶಿವಮೊಗ್ಗ ಪಾಲಿಕೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆದಿತ್ತು. ಆದರೆ ತುಮಕೂರು , ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜನರು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೆ ಮೂರೂ ಪಕ್ಷಗಳಿಗೆ ಮಣೆ ಹಾಕಿದ ಮತದಾರರು ಬಿಜೆಪಿ, ಕಾಂಗ್ರೆಸ್ ,ಜೆಡಿಎಸ್ ಸ್ಥಾನಗಳನ್ನು ಹಂಚಿಕೂಂಡರು. ಆದರೆ ಸ್ಪಷ್ಟ ಬಹುಮತ ಇಲ್ಲದೆ ತುಮಕೂರು, ಮೈಸೂರು ಪಾಲಿಕೆ ಅತಂತ್ರ ಸ್ಥಿತಿ ತಲುಪಿತ್ತು. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟವಾಗಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ತಿಂಗಳ ಕೊನೆಯ ದಿನದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 12, ಜೆಡಿಎಸ್ 10 , ಕಾಂಗ್ರೆಸ್, 10 ಪಕ್ಷೇತರರು , 3 ಜನರು ಒಟ್ಟು 35 ಜನರು ಆಯ್ಕೆ ಆಗಿದ್ದರು.
ಆದರೆ ಮ್ಯಾಜಿಕ್ ನಂಬರ್ ಪಡೆಯಲು ಯಾವ ಪಕ್ಷದವರಿಗೆ ಸಾಧ್ಯವಾಗಲಿಲ್ಲ. ಇದು ಪಾಲಿಕೆಯನ್ನು ಅತಂತ್ರ ಸ್ಥಿತಿಗೆ ತಲುಪಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದೇ ರೀತಿ ತುಮಕೂರು ಮಹಾನಗರ ಪಾಲಿಕೆಯ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿ ಕೊಂಡು ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರ ನಡೆಸಲು ಬಿಡಬಾರದು ಎಂದು ತೀರ್ಮಾನಿಸಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಹೈಕಮಾಂಡ್ ನಾಯಕರು ತಮ್ಮ ತಮ್ಮ ಸದಸ್ಯರುಗಳನ್ನು ಬಿಜೆಪಿ ಪಕ್ಷದವರು ಸೆಳೆಯದಂತೆ ತೀವ್ರ ನಿಗಾ ವಹಿಸಿದ್ದರು.
ಬಿಜೆಪಿ ಪಕ್ಷದವರು 12 ಜನ ಇದ್ದಾರೆ. ಆದರೆ ಅವರಿಗೆ ಪಕ್ಷೇತರರು ಬೆಂಬಲ ನೀಡುತ್ತಾರೆ. ಆದರೆ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಪರಿಣಾಮ ಹೆಚ್ಚು ಬಲ ಶಕ್ತಿ ಹೊಂದಿದೆ.
ಇದರಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು, ವಿದಾನ ಪರಿಷತ್ ಸದಸ್ಯರು ಬೆಂಬಲವೂ ಇದೆ. ಈ ಇಬ್ಬರನ್ನು ಗಣನೆಗೆ ತೆಗೆದುಕೊಂಡರೆ ಒಟ್ಟು ಸಂಖ್ಯೆ 22 ಅಗಿದೆ.
*ಜೆಡಿಎಸ್ 10 ರಲ್ಲಿ ಒಂದು ಸಂಖ್ಯೆ ಕಡಿಮೆ ಅಗಿದೆ*
ತುಮಕೂರು ಮಹಾನಗರ ಮಾಲಿಕೆಯ 22ನೆ ವಾರ್ಡ್‍ನ ಕಾಪೆರ್Çರೇಟರ್ ಆಗಿ ಗೆಲುವು ಸಾಧಿಸಿದ್ದ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಯನ್ನು ಚುನಾವಣೆ ನಡೆದ ಕೆಲವು ದಿನಗಳಲ್ಲಿ ಬಟವಾಡಿಯ ರಾಷ್ಟ್ರೀಯ ಹೆದ್ದಾರಿ ರಸ್ತೆ 48 ರಸ್ತೆ ಫ್ಲೈ ಓವರ್ ಬಳಿ ಸರ್ವಿಸ್ ರಸ್ತೆಯಲ್ಲಿ ಬರ್ಭರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಇದರಿಂದ ಜೆಡಿಎಸ್ ಒಂದು ಸಂಖ್ಯೆ ಕಡಿಮೆ ಆಗಿದೆ. ಇಲ್ಲಿನ ವಾರ್ಡ್‍ಗೆ ಈಗ ಚುನಾವಣೆ ನಡೆಯಬೇಕಿದೆ.
*ಪಾಲಿಕೆಯಲ್ಲಿ ಅದಿಕಾರದ ಗದ್ದುಗೆ ಎರಲು ಮ್ಯಾಜಿಕ್ ನಂ 19 ಬೇಕಿದೆ ಈ ಮ್ಯಾಜಿಕ್ ನಂ ಬಿಜೆಪಿ ಮಾಸ್ರ್ಟ ಪ್ಲಾನ*
ಹೌದು ಈ ಬಾರಿ ಎನಾದರು ಮಾಡಿ ಅದಿಕಾರದ ಗದ್ದುಗೆ ಎರಲು ಬಿಜೆಪಿ ಬಾರಿ ಕಸರತ್ತು ನೆಡೆಸುತ್ತಿದೆ.
ಈಗಾಗಲೇ 12 ಸ್ಥಾನಗಳನ್ನು ಗೆದು ಅತಿ ದೌಡ್ಡ ಪಕ್ಷವಾಗಿ ಹೂರ ಹೂಮ್ಮಿರುವ ಬಿಜೆಪಿ ಗೆ ಪಕ್ಷೇತರರು ಬೆಂಬಲಿಸುವ ಸಾದ್ಯತೆ ಹೆಚ್ಚಾಗಿದೆ. ಇದರ ನಡುವೆ ಇನ್ನು ನಾಲ್ಕು ಸಂಖ್ಯೆಗಳ ಅವಶ್ಯಕತೆ ಇದೆ ಅದಕ್ಕೆಂದೇ ಬಿಜೆಪಿ ಹುರಿಯಾಳು ಗಳು ಜೆಡಿಎಸï, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಪರೇಷನ್ ಕಮಲದ ಮೂಲಕ ಸೆಳೆಯಲು ತಿವ್ರವಾಗಿ ಕಸರತ್ತು ನೆಡೆಸುತ್ತಿದ್ದಾರೆ..ಅದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರು, ವಿದಾನ ಪರಿಷತ್ ಸದಸ್ಯರು, ಸಚಿವರು ಇರುವದರಿಂದ ಉಪಯೋಗ ಅಗುವುದಿಲ್ಲಾ ಎಂದು ಕೈ ಚೆಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ…ಅದರೆ ನಿರಂತರವಾಗಿ ತಮ್ಮ ಪ್ರಯತ್ನ ಮುಂದು ವರೆಸಿದೆ ಬಿಜೆಪಿ, ಮೇಯರ್ 2, ಅ ಮಹಿಳೆ ಉಪ ಮೇಯರ್, ಮಹಿಳೆ ಸರ್ಕಾರ ನಿಗದಿ ಪಡಿಸಿದೆ.
ಇದರಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮೇರ್ಯ ಸ್ಥಾನಕ್ಕೆ ಲಲಿತಾ ಜಹಾಂಗಿರ್ ರವಿ ಇವರನ್ನು ಜೆಡಿಎಸ್ ಕಾಂಗ್ರೆಸ್ ಪಕ್ಷದಿಂದ ಅಯ್ಕೆ ಮಾಡುವಲ್ಲಿ ಸಣ್ಣ ಕೈಗಾರಿಕೆ ಸಚಿವರು ಅದಾ ಎಸ್ ಅರ್ ಶ್ರೀನಿವಾಸ್ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿ ಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ರ್ವ ಅವರು ಹಸಿರು ನಿಶಾನೆ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಉಪ ಮೇರ್ಯ ಸ್ಥಾನಕ್ಕೆ ಪ್ರಬಾವತಿ ಸುದೀಶ್ರ್ವ ಹಾಗೂ ರೂಪಶ್ರೀ ಶೆಟ್ಟಳ್ಳಯ್ಯ ಇವರ ನಡುವೆ ಬಾರಿ ಪೈಪೋಟಿ ನೆಡೆದಿದೆ. ಅದರೆ ಅಂತಿಮವಾಗಿ ರೂಪಶ್ರೀ ಶೆಟ್ಟಳ್ಳಯ್ಯ ಅವರು ಅಯ್ಕೆ ಅಗುವ ಸಾದ್ಯತೆ ಹೆಚ್ಚಾಗಿದೆ. ಯಾಕೆಂದರೆ ಪ್ರಬಾವತಿ ಸುದೀಶ್ರ್ವ ಅವರು ಹಿನ್ನಡೆ ಅಗುವ ಸಾದ್ಯತೆ ಹೆಚ್ಚಾಗಿದೆ ಕಳೆದ ಬಾರಿ ಸುದೀಶ್ರ್ವ ಅವರು ಮೇರ್ಯ ಅಗಿ ಅರು ತಿಂಗಳು ಅದಿಕಾರ ನೆಡೆಸಿದ್ದರು, ಇದೇ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಉಪ ಮುಖ್ಯಮಂತ್ರಿ ಪರಮೇಶ್ರ್ವ ಅವರು ರೂಪಶ್ರೀ ಶೆಟ್ಟಳ್ಳಯ್ಯ ಅವರನ್ನು ಬೆಂಬಲಿಸುವ ಸಾದ್ಯತೆ ಇದೆ. ಅದರೆ ಕೊನೆ ಗಳಿಗೆಯಲ್ಲಿ ಏನಾಗುತ್ತದೆ ಕಾದು ನೋಡ ಬೇಕಿದೆ.
*ತುಮಕೂರು ನಗರದ ಶಾಸಕರಾದ ಜಿ ಬಿ ಜ್ಯೋತಿ ಗಣೇಶ್ ಅಪರೇಷನ್ ಕಮಲ ಮಾಡಲು ಹಿಂದೇಟು*
ಹೌದು ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ತಿ ಸರ್ಕಾರದಲ್ಲಿ ಅತೃಪ್ತ ಶಾಸಕರನ್ನು ಸೆಳೆದು ಬಿಜೆಪಿ ಅದಿಕಾರಕ್ಕೆ ಬರಲು ಹಲವು ಬಾರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹಲವು ಬಾರಿ ಪ್ರಯತ್ನ ಪಟ್ಟಿದ್ದರು ಅದರೆ ಅದು ಸಾದ್ಯವಾಗಲಿಲ್ಲಾ ಇದರಿಂದ ಬಾರಿ ಮುಖ ಬಂಗ ಅನುಬವಿಸಿದರು. ಇದರಿಂದ ತೀರಾ ವಿಚಲಿತರಾದ ಶಾಸಕರಾದ ಜಿ ಬಿ ಜ್ಯೋತಿ ಗಣೇಶ್ ಅಷ್ಟೇನು ಒಲವು ತೋರಿಲ್ಲಾ ಅದರೆ ಮಾಜಿ ಸಚಿವ ರ್ಆ ಅಶೋಕï, ವಿ ಸೋಮಣ್ಣ ಸೇರಿದಂತೆ ಇತರರು ಏನಾದರು ಮಾಡಿ ತುಮಕೂರು ಮಹಾನಗರ ಪಾಲಿಕೆಯ ಅದಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಕಸರತ್ತು ನೆಡೆಸುತ್ತಿದ್ದಾರೆ.
*ಬಿ ಜೆ ಪಿ ಯ ಮಾಜಿ ಸಚಿವ ಸೊಗಡು ಶಿವಣ್ಣ ಮನಸ್ಸು ಮಾಡಿದರೆ ಬಿಜೆಪಿ ಯಶಸ್ವಿಯಾಗ ಬಹುದು*
ಹೌದು ತುಮಕೂರು ಜಿಲ್ಲಾ ಬಿಜೆಪಿ ಘಟಕ ಈಗ ಒಡೆದ ಮನೆಯಾಗಿದೆ ಇದರ ಪರಿಣಾಮವಾಗಿ ಬಿಜೆಪಿ ಗೆದು ಸ್ಪಷ್ಟವಾಗಿ ಸ್ವಂತ ಬಲದಿಂದ ಅದಿಕಾರಕ್ಕೆ ಬರುವ ಎಲ್ಲಾ ಸಾದ್ಯತೆ ಇತ್ತು ಅದರೆ ಇಲ್ಲಿನ ಒಡಕಿನ ಲಾಭವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಡೆಯಿತ್ತು ಅದರೆ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಬೆಂಬಲಿಗರು ಎರೆಡು ಕಡೇ ಇದ್ದರೆ ಸೂಗಡು ಶಿವಣ್ಣ ಅವರ ಅದೇಶ ಅವರಿಗೆ ವೇದ ವಾಕ್ಯ ಅದರೆ ಬಿಜೆಪಿ ಪಕ್ಷದ ಮುಖಂಡರು ಸೂಗಡು ಶಿವಣ್ಣ ಅವರ ಜೂತೆ ಚರ್ಚೆ ನೆಡೆಸಲು ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ ಯಾಕೆ ಅಂದರೆ ಬಿಜೆಪಿ ಅವರನ್ನು ಬೈದವರಿಗೆ ಅಪ್ಪ ಮಕ್ಕಳು ಸ್ಥಾನ ಮಾನ ಕೊಟ್ಟರು ಅದರೆ ಮೂಲ ಬಿಜೆಪಿ ಅವರನ್ನು ಮೂಲೆ ಗುಂಪು ಮಾಡಿದರು ಇದರಿಂದ ಜಿಲ್ಲೆ ಯಲ್ಲಿ ಪಕ್ಷ ಸಂಘಟನೆ ಬಾರಿ ಹಿನ್ನಡೆ ಉಂಟಾಗಿದೆ ಎಂದು ಪದೇ ಪದೇ ಹೇತ್ತಲೇ ಬಂದಿದ್ದಾರೆ. ಇದರ ವಿಚಾರವಾಗಿ ಶಿವಣ್ಣ ಅವರ ಜೂತೆ ಚರ್ಚೆ ನೆಡೆಸಲು ಯಾರಿಗೂ ಸಾದ್ಯ ವಾಗುತ್ತಿಲ್ಲಾ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಏನಾದರು ಮಾಡಿ ಅದಿಕಾರದ ಗದ್ದುಗೆ ಎರಲು ಮ್ಯಾಜಿಕ್ ನಂ ಬಿಜೆಪಿ ಮಾಸ್ರ್ಟ ಪ್ಲಾನ್ ಸಿದ್ದಪಡಿಸಿದ್ದಾರೆ ಅದರೆ ಜೆಡಿಎಸ್ ಕಾಂಗ್ರೆಸ್ ಮೈತ್ತಿ ಮಾಡಿ ಕೊಂಡು ಅದಿಕಾರದ ಗದ್ದುಗೆ ಎರಲು ಟೊಂಕ ಕಟ್ಟಿ ನಿಂತಿದೆ ಅದರೆ ಕೊನೆ ಗಳಿಗೆಯಲ್ಲಿ ಯಾರ ಕೈಯಿ ಮೇಲಾಗುವುದು ಕಾದು ನೋಡ್ಬೇಕಾಗಿದೆ