ವಾಷಿಂಗ್ಟನ್, ಜ.28- ಭಾರತೀಯ ಮೂಲದ ಅಮೆರಿಕ ಸೆನೆಟರ್(ಸಂಸದೆ) ಕಮಲಾ ಹ್ಯಾರಿಸ್ 2020ರ ಅಧ್ಯಕ್ಷೀಯ ಚುನಾವಣಾ ಸಿದ್ಧತೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಆಕ್ರಮಣಗಳು ನಡೆದಿವೆ ಎಂದು ವಿಷಾದಿಸಿದರು.
ಕ್ಯಾಲಿಪೋರ್ನಿಯಾದ ಓಕ್ಲ್ಯಾಂಡ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಕಾರ ಮತ್ತು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ 54ರ ಪ್ರಾಯದ ಕಮಲಾ, ತಾವು 2020ರ ಅಧ್ಯಕ್ಷೀಯ ಚುನಾವಣೆಗೆ ತಾವು ಸ್ಪರ್ಧಿಸುವುದಾಗಿ ಸಭಿಕರ ಪ್ರಚಂಡ ಕರತಾಡನದ ನಡುವೆ ಘೋಷಿಸಿದರು.