ವಾಷಿಂಗ್ಟನ್, ಜ.28- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಯಲ್ಲಿರುವ ಪ್ರಥಮ ಹಿಂದೂ-ಅಮೆರಿಕನ್ ಎಂಬ ಹೆಮ್ಮೆ ನನಗಿದೆ ಎಂದು ಡೆಮೊಕ್ರಾಟಿಕ್ ಪಕ್ಷದ ಸಂಸದೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.
ಅಮೆರಿಕ ಕಾಂಗ್ರೆಸ್ನ ಆಯ್ಕೆಯಾದ ಪ್ರಥಮ ಹಿಂದು ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ತುಳಸಿ ಧಾರ್ಮಿಕ ವಾರ್ತಾ ಸೇವೆಗಳ(ಆರ್ಎನ್ಎಸ್) ಸಂಸ್ಥೆಗೆ ಬರೆದಿರುವ ಲೇಖನವೊಂದರಲ್ಲಿ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ.
2020ರಂದು ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಾವು ಜ.11ರಂದು ಘೋಷಿಸಿದ ನಂತರ, ಒಂದು ವರ್ಗದ ಜನರು ನನ್ನನ್ನು ಧಾರ್ಮಿಕ ಧರ್ಮಾಂದತೆ ವಿಷಯದಲ್ಲಿ ಬಲಿಪಶು ಮಾಡಲು ಯತ್ನಿಸಿದರು. ನನ್ನ ಮತ್ತು ನನ್ನ ಬೆಂಬಲಿಗರ ವಿರುದ್ಧ ಅಪಪ್ರಚಾರ ಮಾಡಿದರು. ಆದರೂ ನಾವು ಇವುಗಳಿಂದ ಎದೆಗುಂದಿಲ್ಲ ಎಂದು 37 ವರ್ಷದ ತುಳಸಿ ಹೇಳಿದ್ದಾರೆ.