ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಗಾಯದ ಸಮಸ್ಯೆಯಿಂದ ಬಳಲಿ ಮೂರನೇ ಏಕದಿನ ಪಂದ್ಯದಿಂದ ಹೊರ ನಡೆದಿದ್ದಾರೆ.
ಮೌಂಟ್‍ಮೌಂಗನೂಯಿ ಅಂಗಳದಲ್ಲಿ ಸೋಮವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಅಭಿಮಾನಿಗಳು ನಿರಾಸೆ ಅನುಭವಿಸಿದರು.ಮೂಲಕಗಳ ಪ್ರಕಾರ ಮಾಜಿ ನಾಯಕನಿಗೆ ಮುಂದಿನ ಎರಡು ಪಂದ್ಯಗಳಿಗೂ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಧೋನಿ ಬದಲಿಗೆ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್‍ಗೆ ಸ್ಥಾನ ನೀಡಲಾಗಿದೆ.
ಧೋನಿ ಮೊನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಚುರುಕಿನ ಸ್ಟಂಪಿಂಗ್ ಮಾಡಿ ಗಮನ ಸೆಳೆದಿದ್ದರು. ಇದಲ್ಲದೇ ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧ ಶತಕಗಳನ್ನ ಬಾರಿಸಿ ಸರಣಿ ಶ್ರೇಷ್ಠ ಪ್ರಸಸ್ತಿಗೆ ಭಾಜನರಾಗಿದ್ರು.