ನವದೆಹಲಿ: ಅಕ್ರಮ ಸಾಲ ನೀಡಿದ್ದ ಆರೋಪದಡಿ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ಹಾಗೂ ಆಕೆ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ಗ್ರೂಪ್ ಮುಖ್ಯಸ್ಥ ವೇಣುಗೋಪಾಲ್ ಧೂಟ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸಿಬಿಐನ ಬ್ಯಾಂಕಿಂಗ್ ಮತ್ತು ಭದ್ರತಾ ಫ್ರಾಡ್ ಸೆಲ್ ನ ಎಸ್ಪಿ ಸುಧಾಂಶು ಧಾರ್ ಮಿಶ್ರಾ ಇವರೆಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈಗ ಅವರನ್ನು ಜಾರ್ಖಂಡ್ ರಾಂಚಿಯ ಸಿಬಿಐ ಆರ್ಥಿಕ ಅಪರಾಧ ಶಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಸುಧಾಂಶು ಜ.22ರಂದು ಎಫ್ಐಆರ್ಗೆ ಸಹಿ ಹಾಕಿದ್ದರು. ನಂತರ ಜ.24ರಂದು ಪ್ರಕರಣ ದಾಖಲಿಸಲಾಗಿತ್ತು. ವಿಡಿಯೋಕಾನ್ ಸಂಸ್ಥೆಯು ಐಸಿಐಸಿಐ ಬ್ಯಾಂಕ್ನಿಂದ 3250 ಕೋಟಿ ರೂ. ಸಾಲವನ್ನು 2012ರಲ್ಲಿ ಅಕ್ರಮವಾಗಿ ಪಡೆದಿತ್ತು. ಆದರೆ ಈ ಸಾಲದ ಮೊತ್ತವನ್ನು ವಿಡಿಯೋಕಾನ್ ಹೂಡಿಕೆದಾರ ಧೂತ್ ಮೂಲಕ ಕೊಚ್ಚಾರ್ ಅವರ ಇನ್ನೊಂದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಹಾಗೆಯೇ ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು ಎಂಬ ಆರೋಪವಿದೆ.
Videocon loan case: CBI officer transferred a day after signing FIR against accused