ನಿನ್ನೆ ಮೌಂಟ್ ಮೌಂಗನೂಯಿ ಅಂಗಳದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆಗೆ ಓಪನರ್ಸ್ಗಳಾದ ಶಿಖರ್ ಧವನ್ ಹಾಗು ರೋಹಿತ್ ಶರ್ಮಾ ಸಾಲಿಡ್ ಓಪನಿಂಗ್ ಕೊಟ್ರು.
ರನ್ ಮೆಳೆ ಸುರಿಸುವ ಮೌಂಟ್ ಮೌಂಗನೂಯಿ ಅಂಗಳದಲ್ಲಿ ಧವನ್ ಮತ್ತು ರೋಹಿತ್ ಆರಂಭದಲ್ಲೆ ಬೌಂಡರಿಗಳ ಸುರಮಳೆಗೈದ್ರು. ಸಮಯೋಚಿತ ಬ್ಯಾಟಿಂಗ್ ಮಾಡಿದ ಈ ಜೋಡಿ ಮೊದಲ 20 ಓವರ್ಗಳಲ್ಲಿ ಕಿವೀಸ್ ಬೌಲರ್ಗಳ ಬೆವರಿಳಿಸಿದ್ರು.
ಅರ್ಧ ಶತಕ ಬಾರಿಸಿದ ಡ್ಯಾಶಿಂಗ್ ಓಪನರ್ಸ್
ಕಿವೀಸ್ ಘಾತಕ ವೇಗಿಗಳನ್ನ ಅಟ್ಯಾಕ್ನ್ನ ಸಮರ್ಥವಾಗಿ ಎದುರಿಸಿದ ರೋಹಿತ್ ಮತ್ತು ಧವನ್ ತಲಾ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 18ನೇ ಓವರ್ನಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 38ನೇ ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದ್ರು.
ಇನ್ನು ಡೆಲ್ಲಿ ಡ್ಯಾಶರ್ ಶಿಖರ್ ಧವನ್ 21ನೇ ಓವರ್ನಲ್ಲಿ ಅರ್ಧ ಶತಕ ಬಾರಿಸಿದ್ರು. ಈ ಅರ್ಧ ಶತಕದೊಂದಿಗೆ ಧವನ್ 27ನೇ ಅರ್ಧ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದ್ರು. ಜೊತೆಗೆ ಸರಣಿಯಲ್ಲಿ ಸತತ ಎರಡನೇ ಅರ್ಧ ಶತಕ ಬಾರಿಸಿದ್ರು.
ಮೊದಲ ವಿಕೆಟ್ಗೆ 154 ರನ್ ಗಳಿಸಿದ ಗಳಿಸಿದ ರೋಹಿತ್ -ಧವನ್
ಕಿವೀಸ್ ಬೌಲರ್ಗಳನ್ನ ಮನಸೋ ಇಚ್ಛೆ ಚೆಂಡಾಡಿದ ರೋಹಿತ್ ಮತ್ತು ಧವನ್ ಮೊದಲ ವಿಕೆಟ್ಗೆ ಬರೋಬ್ಬರಿ 154 ರನ್ ಗಳ ಜೊತೆಯಾಟ ನೀಡಿದ್ರು. ಇವರಿಬ್ಬರ ಸಾಲಿಡ್ ಓಪನಿಂಗ್ನಿಂದಲೇ ನಂತರ ಬಂದ ಬ್ಯಾಟ್ಸ್ಮನ್ ಗಳ ಒತ್ತಡ ಕಡಿಮೆ ಮಾಡಿತು.
2ನೇ ಪಂದ್ಯದಲ್ಲಿ ಧವನ್ – ರೋಹಿತ್ ಅಬ್ಬರ..!
ರೋಹಿತ್ ಧವನ್
ಎಸೆತ 66 67
ರನ್ 87 66
4/6 9/3 9/0
ಸರಾಸರಿ 90.62 98.50
ಬಿರುಸಿನ ಬ್ಯಾಟಿಂಗ್ ಮಾಡಿದ ಹಿಟ್ಮ್ಯಾನ್ ರೋಹಿತ್ ಶರ್ಮಾ 66 ಎಸೆತಗಳನ್ನ ಎದುರಿಸಿ 87 ರನ್ ಕಲೆ ಹಾಕಿದ್ರು. ಇದರಲ್ಲಿ 9 ಬೌಂಡರಿ ಮೂರು ಸಿಕ್ಸರ್ ನೊಂದಿಗೆ 90/62 ಎವರೇಜ್ ಹೊಂದಿದ್ರು. ಇನ್ನು ಶಿಖರ್ ಧವನ್ 67 ಎಸೆತ ಎದುರಿಸಿ 9 ಬೌಂಡರಿಗಳೊಂದಿಗೆ 66 ರನ್ ಕಲೆ ಹಾಕಿ 98.50 ಎವರೇಜ್ ಪಡೆದ್ರು.
ಸಚಿನ್ – ವೀರೂ ದಾಖಲೆ ಅಳಿಸಿದ ರೋಹಿತ್ -ಧವನ್ ಜೋಡಿ..!
ಯೆಸ್. ಈ ಜೋಡಿ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಗ್ರೇಟ್ ಓಪನರ್ಗಳಾಗಿದ್ದ ಕ್ರಿಕೆಟ್ ದೇವರು ಮತ್ತು ಡೆಲ್ಲಿ ಡ್ಯಾಶರ್ ದಾಖಲೆ ಅಳಿಸಿ ಹಾಕಿದ್ದಾರೆ. ಸಚಿನ್ ಮತ್ತು ವಿರೇಂದ್ರ ಸೆಹ್ವಾಗ್ ಜೋಡಿ ಏಕದಿನ ಕ್ರಿಕೆಟ್ನಲ್ಲಿ 13 ಬಾರಿ 150ಕ್ಕೂ ಹೆಚ್ಚು ರನ್ ಜೊತೆಯಾಟ ಕೊಟ್ಟಿದ್ರು. ಇದೀಗ ಈ ಧವನ್ ಮತ್ತು ರೋಹಿತ್ ಜೋಡಿ 14ನೇ ಬಾರಿ 150ಕ್ಕೂ ಹೆಚ್ಚು ರನ್ಗಳಿಸಿ ಸಚಿನ್ -ಸೆಹ್ವಾಗ್ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
ಒಟ್ನಲ್ಲಿ ಬಹಳ ದಿನಗಳ ನಂತರ ರೋಹಿತ್ ಮತ್ತು ಧವನ್ ಸಾಲಿಡ್ ಓಪನಿಂಗ್ ಕೊಟ್ಟು ಭರವಸೆ ಮೂಡಿಸಿದ್ದಾರೆ. ಮುಂದೆಯೂ ಈ ಜೋಡಿ ಇದೇ ಫಾರ್ಮ್ ಮುಂದುವರೆಸಿ ವಿಶ್ವಕಪ್ಗೆ ತಾವೇ ಓಪನರ್ಸ್ ಅನ್ನೋದನ್ನ ಪ್ರೂವ್ ಮಾಡಬೇಕಿದೆ.