ಕಿವೀಸ್ ನಾಡಲ್ಲಿ ಮಿಸ್ಟರ್ ಕೂಲ್ ಧೋನಿಯೇ ಕಿಂಗ್..!

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಕಿವೀಸ್ ನಾಡಲ್ಲೂ ಕಮಾಲ್ ಮಾಡಿದ್ದಾರೆ. ಸಾಲಿಡ್ ಫಾರ್ಮ್ನಲ್ಲಿರುವ ಮಾಹಿ ಇತ್ತಿಚೆಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧ ಶತಕಗಳನ್ನ ಬಾರಿಸಿ ಮ್ಯಾನ್ ಆಫ್ ದಿ ಸಿರೀಸ್ ಪಡೆದಿದ್ರು.

ಸಾಲಿಡ್ ಫಾರ್ಮ್ನಲ್ಲಿರುವ ಚಾಂಪಿಯನ್ ಪ್ಲೇಯರ್ ಧೋನಿ ಕಿವೀಸ್ ನಾಡಲ್ಲೂ ತಮ್ಮ ತಾಕತ್ತೇನೆಂಬುದನ್ನ ತೋರಿಸಿಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶದಿಂದ ವಂಚಿತರಾಗಿದ್ದ ಧೋನಿ ನಿನ್ನೆ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ನಲ್ಲಿ ಕಮಾಲ್ ಮಾಡಿದ್ರು.
ಮೌಂಟ್ ಮೌಂಗನೂಯಿ ಅಂಗಳದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ ಅಗತ್ಯ ಸಂದರ್ಭದಲ್ಲಿ ನೆರವಾಗಿ ತಂಡ ಖಿhಡಿee ಊuಟಿಜಡಿeಜ Pಟus ಸ್ಕೋರ್ ದಾಖಲಿಸುವಲ್ಲಿ ನೆರವಾದ್ರು. ತಂಡದ್ ಸ್ಫೋಟಕ ಬ್ಯಾಟ್ಸ್ ಮನ್ ಅಂಬಾಟಿ ರಾಯ್ಡು ಮತ್ತು ಕೇದಾರ್ ಜಾದವ್ ಜೊತೆಗೂಡಿ ಅಡಿuಛಿiಚಿಟ ಇನ್ನಿಂಗ್ಸ್ ಕಟ್ಟಿಕೊಟ್ಟು ಕೇನ್ ವಿಲಿಯಮ್ಸನ್ ಪಡೆಗೆ ಶಾಕ್ ಕೊಟ್ಟಿದ್ದಾರೆ.

ಬಿರುಸಿನ ಬ್ಯಾಟಿಂಗ್ ಮಾಡಿದ ಧೋನಿ 33 ಎಸೆತಗಳನ್ನ ಎದುರಿಸಿ 5 ಬೌಂಡರಿ 1 ಸಿಕ್ಸರ್ ನೆರವಿನ್ನೊಂದಿಗೆ ಅಜೇಯ 48 ರನ್ ಗಳಿಸಿ ಪರಾಕ್ರಮ ಮೆರೆದಿದ್ದಾರೆ. ಒಂದು ವೇಳೆ ಧೋನಿ ಅಬ್ಬರದ ಬ್ಯಾಟಿಂಗ್ ಮಾಡದಿದ್ದರೆ ಕೇನ್ ವಿಲಿಯಮ್ಸನ್ ಪಡೆ ಮೇಲೆ ಒತ್ತಡ ಹಾಕಲು ಕಷ್ಟವಾಗುತ್ತಿತ್ತು. ಚೇಸಿಂಗ್ ಪಿಚ್ ಆಗಿರೋದ್ರಿಂದ ಕಿವೀಸ್ ಬ್ಯಾಟ್ಸ್ ಮನ್ಗಳು ಸುಲಭವಾಗಿ ಗೆಲ್ಲುತ್ತಿದ್ರು.

ಕಿವೀಸ್ ನಾಡಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ ರಾಂಚಿ ರಾಂಬೊ
ಕಳೆದ ಹತ್ತು ವರ್ಷಗಳಿಂದ ಕಿವೀಸ್ ನಾಡಲ್ಲಿ ಆಡಿರುವ ಧೋನಿ ವಿಶಿಷ್ಟ ದಾಖಲೆಯನ್ನ ಬರೆದಿದ್ದಾರೆ. ಆಡಿದ ಕೆಲವೇ ಪಂದ್ಯಗಳಲ್ಲಿ ಮಾಹಿ ಅದ್ಬುತ ಇನ್ನಿಂಗ್ಸ್ ಕಟ್ಟಿದ್ದಾರೆ. ತಂಡದ ಯಾವ ಬ್ಯಾಟ್ಸ್ ಮನ್ಗಳು ಇಷ್ಟು ಕಡಿಮೆ ಇನ್ನಿಂಗ್ಸ್ ನಲ್ಲಿ ಧೋನಿಯಂತೆ ಆಡಿಲ್ಲ . ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಧೋನಿ ಸಾಧನೆ ಏನು ಅನ್ನೋದನ್ನ ಅಂಕಿ ಅಂಶಗಳೆ ಹೇಳುತ್ತವೆ.

ಕಿವೀಸ್ ನಾಡಲ್ಲಿ ಧೋನಿಯ ಸಾಧನೆ
ಇನ್ನಿಂಗ್ಸ್ – 11
ರನ್ – 541
ಎವರೇಜ್ – 90.17
ಸ್ಟ್ರೈಕ್ ರೇಟ್ – 96.95
ಅರ್ಧ ಶತಕ – 6
ಹೈಯೆಸ್ಟ್ ಸ್ಕೋರ್ – 85*
ಕಿವೀಸ್ ನಾಡಲ್ಲಿ ಅದ್ಬುತ ಇನ್ನಿಂಗ್ಸ್ ರೆಕಾರ್ಡ್ ಹೊಂದಿರುವ ಧೋನಿ ಈ ಹಿಂದೆ 11 ಇನ್ನಿಂಗ್ಸ್ಗಳಿಂದ 541 ರನ್ ಕಲೆ ಹಾಕಿದ್ದಾರೆ. 6 ಅರ್ಧ ಶತಕ ಬಾರಿಸಿರುವ ಮಾಹಿ 90.17 ಎವರೇಜ್ ಪಡೆದು 96.95 ಸ್ಟ್ರೈಕ್ ರೇಟ್ ಪಡೆದಿದ್ದಾರೆ. ಅಜೇಯ 85 ಇದುವರೆಗಿನ ಹೈಯೆಸ್ಟ್ ಸ್ಕೋರ್ ಆಗಿದೆ.

ಒಟ್ನಲ್ಲಿ ಧೋನಿ ನಾಯಕನಾಗಿ ಕಿವೀಸ್ ನಾಡಲ್ಲಿ ವಿಫಲವಾಗಿರಬಹುದು ಆದರೆ ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ವಿಶಿಷ್ಟ ಸಾಧನೆ ಮಾಡಿದ್ದಾರೆ ಅನ್ನೋದೇ ಇಂಟ್ರೆಸ್ಟಿಂಗ್ ವಿಚಾರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ