ಮೇನಲ್ಲಿ ಭಾರತ- ಅಂತಾರಾಷ್ಟ್ರೀಯ ಕಬಡ್ಡಿ ಪ್ರೀಮೀಯರ್ ಲೀಗ್ ಟೂರ್ನಿಗೆ ಸಿದ್ಧತೆ

ಬೆಂಗಳೂರು, ಜ.27- ಗ್ರಾಮೀಣ ಕ್ರೀಡೆ ಕಬಡ್ಡಿಗೆ ಹೊಸ ಸ್ವರೂಪ ನೀಡಿ ಹೆಚ್ಚು ಜನಪ್ರಿಯಗೊಳಿಸಲು ಮುಂದಾಗಿರುವ ನ್ಯೂ ಕಬಡ್ಡಿ ಫೆಡರೇಷನ್ ಮೇನಲ್ಲಿ ಭಾರತ- ಅಂತಾರಾಷ್ಟ್ರೀಯ ಕಬಡ್ಡಿ ಪ್ರೀಮೀಯರ್ ಲೀಗ್ ಟೂರ್ನಿ ನಡೆಸಲು ಅಗತ್ಯ ಸಿದ್ಧತೆ ಕೈಗೊಂಡಿದೆ.

ಒಟ್ಟು ಎಂಟು ತಂಡಗಳು ಪಾಲ್ಗೊಳ್ಳುವ ಇಂಡಿಯಾ ಇಂಟರ್‍ನ್ಯಾಷನಲ್ ಪ್ರೀಮಿಯರ್ ಪೆÇ್ರೀ ಕಬಡ್ಡಿ ಲೀಗ್‍ಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಸಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ನ್ಯೂ ಕಬಡ್ಡಿ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್ ಬಾಬು, ಟೂರ್ನಿಯಲ್ಲಿ ಪಾಲ್ಗೊಳ್ಳಲು 4500 ಕ್ಕೂ ಹೆಚ್ಚು ಆಟಗಾರರು ನೊಂದಣಿ ಮಾಡಿಕೊಂಡಿದ್ದು, ಇವರಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕೇರಳದಲ್ಲೂ ಸಹ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಉತ್ತರ ಭಾರತ, ಈಶಾನ್ಯ ರಾಜ್ಯಗಳು, ಪೂರ್ವ ಭಾರತದಲ್ಲೂ ಅರ್ಹ ಆಟಗಾರರನ್ನು ಆರಿಸಲಾಗುವುದು ಎಂದರು.

ಕಬಡ್ಡಿ ತಂಡಗಳನ್ನು ಖರೀದಿಸಲು ಉತ್ತರ ಭಾರತ ಸೇರಿದಂತೆ ಹಲವಾರು ರಾಜ್ಯಗಳ ಪ್ರಮುಖ ಕಂಪೆನಿಗಳು ಮುಂದೆ ಬಂದಿದ್ದು, ಮುಂದಿನ ತಿಂಗಳು ಆಟಗಾರರ ಬಿಡ್ ನಡೆಸಲಾಗುವುದು. ಬೆಂಗಳೂರು, ಬೆಂಗಳೂರು ರೈನೋ, ತೆಲಗು ಬುಲ್ಸ್, ತಮಿಳುನಾಡು, ಹರಿಯಾಣ, ಮಹಾರಾಷ್ಟ್ರ ಸೇರಿ ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಬಿಡ್ ಮಾಡುವವರಿಗೆ ತಂಡದ ಉಸ್ತುವಾರಿ ನೀಡಲಾಗುವುದು ಎಂದರು.

ಏ.1 ರಿಂದ ಮಲೇಷಿಯಾದಲ್ಲಿ ಕಬಡ್ಡಿ ವಿಶ್ವಕಪ್ ಟೂರ್ನಿ ಆಯೋಜಿಸಿದ್ದು, ನ್ಯೂ ಕಬಡ್ಡಿ ಫೆಡರೇಷನ್ ನಿಂದ ಭಾರತ ತಂಡವನ್ನು ಆಯ್ಕೆ ಮಾಡಲಾಗುವುದು. ಒಂದು ಪಂದ್ಯಕ್ಕೆ ಒಬ್ಬೊಬ್ಬರಿಗೆ ತಲಾ ಒಂದು ಲಕ್ಷ ರೂ ಸಂಭಾವನೆ ನೀಡಲಾಗುವುದು. ಬರುವ ಡಿಸೆಂಬರ್‍ನಲ್ಲಿ ಮಹಿಳಾ ಕಬ್ಬಡ್ಡಿ ಲೀಗ್ ಆರಂಭಿಲು ಉದ್ದೇಶಿಸಲಾಗಿದೆ. ಅಲ್ಲದೆ 19 ವರ್ಷ ವಯೋಮಿತಿಯೊಳಗಿನ ಕಿರಿಯ ಕಬ್ಬಡ್ಡಿ ಆಟಗಾರರ ಟೂರ್ನಿ ನಡೆಸುವ ಚಿಂತನೆ ಇದೆ ಎಂದರು.

ಕಬ್ಬಡ್ಡಿ ಪ್ರೀಮಿರ್ಯ ಟೂರ್ನಿಗಳಿಂದ ಬರುವ ಲಾಭದಲ್ಲಿ ಶೇ 20 ರಷ್ಟು ಆಟಗಾರರಿಗೆ, ಶೇ 10 ರಷ್ಟು ಹಳೆಯ ಕಬಡ್ಡಿ ಆಟಗಾರರ ಕಲ್ಯಾಣ ಸಂಘಗಳಿಗೆ ಶೇ.20 ರಷ್ಟು ವಿವಿಧ ರಾಜ್ಯಗಳಲ್ಲಿ ಕಬಡ್ಡಿ ಆಟಕ್ಕೆ ಪ್ರಾಯೋಜಕತ್ವ ನೀಡಲಾಗುವುದು ಎಂದು ಎಂ.ವಿ.ಪ್ರಸಾದ್ ಬಾಬು ವಿವರಿಸಿದರು.

ವಿಶ್ವಕಪ್ ಕಬಡ್ಡಿ ಲೀಗ್ ನಂತರ ಒಲಿಂಪಿಕ್ ಲೀಗ್ ನಡೆಸಲಾಗುವುದು. ಇದಕ್ಕಾಗಿ 42 ದೇಶಗಳಿಂದ ಈಗಾಗಲೇ ಅನುಮತಿ ಪತ್ರ ಪಡೆಯಲಾಗಿದೆ. ಕಬಡ್ಡಿ ಕ್ರೀಡೆಗೆ ಹೊಸ ಸ್ವರೂಪ, ಸ್ಪರ್ಶ ನೀಡಿ ಈ ಆಟ ಇನ್ನಷ್ಟು ಜನರನ್ನು ತಲುಪುವಂತೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ