ನವದೆಹಲಿ: ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ 2019ರ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ. ವಿಜ್ಞಾನ, ಸಾಮಾಜ ಸೇವೆ , ಇಂಜಿನಿಯರಿಂಗ್ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಈ ಸಾಲಿನಲ್ಲಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸಮಾಜ ಸೇವೆಗಾಗಿ ಸಾಲುಮರದ ತಿಮ್ಮಕ್ಕ, ನಟ-ನೃತ್ಯ ನಿರ್ದೇಶಕ ಪ್ರಭುದೇವ, ಸರೋದ್ ವಾದಕ ರಾಜೀವ್ ತಾರನಾಥ, ಪುರಾತತ್ವ ಶಾಸ್ತ್ರಜ್ಞೆ ಶಾರದ ಶ್ರೀನಿವಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ರೋಹಿಣಿ ಗೋಡುಬಲೆ ಅವರು ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ರಾಜ್ಯದ ಯಾವುದೇ ಸಾಧಕರು ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅವರಿಗೆ ಪದ್ಮಶ್ರೀ ಲಭಿಸಲಿದೆ. ಗಾಯಕ ಶಂಕರ್ ಮಹದೇವನ್, ಡ್ರಮ್ಮರ್ ಶಿವಮಣಿ , ನಟ ಮನೋಜ್ ಬಾಜಪೇಯಿ ಸೇರಿದಂತೆ ಹಲವರು ಈ ಬಾರಿಯ ಪದ್ಮಶ್ರೀ ಪಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 4 ಜನರಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಹಾಗೂ 94 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.
ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ:
ತೀಜನ್ ಬಾಯಿ
ಇಸ್ಮಾಯಿಲ್ ಒಮರ್ ಗುವೆಲೆಹ್ (ವಿದೇಶಿ)
ಅನಿಲ್ ಕುಮಾರ್ ಮಣಿಭಾಯ್ ನಾಯ್ಕ್( ಉದ್ದಿಮೆ)
ಬಲ್ವಂತ್ ಮೊರೇಶ್ವರ್ ಪುರಂದರೆ
ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ:
ಜಾನ್ ಚೇಂಬರ್ಸ್ (ವಿದೇಶಿ)
ಸುಖದೇವ್ ಸಿಂಗ್ ಧಿಂಡ್ಸಾ
ಪ್ರವೀಣ್ ಗೋರ್ಧನ್ (ವಿದೇಶಿ)
ಮಹಾಶೇ ಧರಣಂ ಪಾಲ್ ಗುಲಾಟಿ
ಅಶೋಕ್ ಲಕ್ಷ್ಮಣರಾವ್ ಕುಕೇಡೆ
ಕರಿಯಾ ಮುಂಡಾ
ಬುಧಾದಿತ್ಯ ಮುಖರ್ಜಿ
ಮೋಹನ್ ಲಾಲ್ (ನಟ)
ಎಸ್ ನಂಬಿ ನಾರಾಯಣ್
ಕುಲ್ದಿಪ್ ನಯ್ಯರ್ (ಮರಣೋತ್ತರ)
ವಿ. ಕೆ. ಶುಂಗ್ಲು
ಹುಕುಮ್ದೇವ್ ನಾರಾಯಣ್ ಯಾದವ್
ಬಚೇಂದ್ರಿ ಪಾಲ್