ಇಎಂಒ ಹ್ಯಾನ್ನೋವರ್ 2019 ಗೆ VDW ಸಮಗ್ರ ಸೇವೆಗಳ ಆರಂಭ

  • ಮೆಟಲ್‍ವರ್ಕಿಂಗ್‍ನ ವಾಣಿಜ್ಯ ಮೇಳವಾದ ಇಎಂಒ ಹ್ಯಾನ್ನೋವರ್ 2019 ಈ ವರ್ಷದ ಸೆಪ್ಟಂಬರ್ 16 ರಿಂದ 21 ರವರೆಗೆ ನಡೆಯಲಿದೆ.
  • ಈ ಮೇಳವನ್ನು ಜರ್ಮನಿಯ ಫ್ರಾಂಕ್‍ಫರ್ಟ್ ಎಎಂ ಮೇನ್‍ನ ವಿಡಿಡಬ್ಲ್ಯೂ (ವೆರಿಯನ್ ಡಟ್ಸ್‍ಚರ್ವೆರ್ಕ್‍ಝ್ಯೂಮಶಿನ್‍ಫಾಬ್ರಿಕೆನ್) VDW (Verein Deutscher Werkzeugmaschinenfabriken) ಆಯೋಜಿಸುತ್ತಿವೆ.
  • ಭಾಗವಹಿಸುವ ವೀಕ್ಷಕರು ಮತ್ತು ಪ್ರದರ್ಶಕರಿಗೆ ಆನ್‍ಲೈನ್ ನೋಂದಣಿ, ಡಚ್ ಮೆಸ್ಸೆ ಎಜಿಯ ವಿದೇಶಿ ಪ್ರತಿನಿಧಿಗಳಿಗೆ ವೀಸಾ ನೆರವು ನೀಡಲಿದೆ. ಇದಲ್ಲದೇ, ಇಎಂಒ ಹ್ಯಾನ್ನೋವರ್‍ಗೆ ಆಗಮಿಸಲಿರುವ ಪ್ರತಿನಿಧಿಗಳಿಗೆ ವಿಮಾನ ಮತ್ತು ರೈಲು ವ್ಯವಸ್ಥೆಗೆ ನೆರವಾಗುವುದರ ಜತೆಗೆ ರಚನಾತ್ಮಕವಾದ ಪ್ರವಾಸಕ್ಕೂ ಅವಕಾಶ ಕಲ್ಪಿಸಲಿದೆ.

ಬೆಂಗಳೂರು, 25 ಜನವರಿ 2019: ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಮೆಟಲ್‍ವರ್ಕಿಂಗ್‍ನ ವಾಣಿಜ್ಯ ಮೇಳವಾದ ಇಎಂಒ ಹ್ಯಾನ್ನೋವರ್ 2019 ಈ ವರ್ಷದ ಸೆಪ್ಟಂಬರ್ 16 ರಿಂದ 21 ರವರೆಗೆ ನಡೆಯಲಿದೆ. ಈ ಮೇಳವನ್ನು ಜರ್ಮನಿಯ ಫ್ರಾಂಕ್‍ಫರ್ಟ್ ಎಎಂ ಮೇನ್‍ನ ವಿಡಿಡಬ್ಲ್ಯೂ (ವೆರಿಯನ್ ಡಟ್ಸ್‍ಚರ್ವೆರ್ಕ್‍ಝ್ಯೂಮಶಿನ್‍ಫಾಬ್ರಿಕೆನ್) ಆಯೋಜಿಸುತ್ತಿವೆ. ಇದು ಬೆಲ್ಜಿಯಂನ ಬ್ರುಸೆಲ್ಸ್‍ನ ಯುರೋಪಿಯನ್ ಮಶಿನ್ ಟೂಲ್ ಅಸೋಸಿಯೇಶನ್ ಸೆಸಿಮೇ ಪರವಾಗಿ ಆಯೋಜನೆಯಾಗುತ್ತಿರುವ ವಾಣಿಜ್ಯಮೇಳವಾಗಿದೆ. ಜರ್ಮನಿಯ Deutsche Messe AG, Hanover ಸಹಕಾರದಲ್ಲಿ ನಡೆಯುತ್ತಿದೆ.
ಜರ್ಮನ್ ಮಶಿನ್ ಟೂಲ್ ಉದ್ಯಮ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ವಕ್ತಾರನಾಗಿ ವಿಡಿಡಬ್ಲ್ಯೂ ಕೆಲಸ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಇದು ಹಲವು ವರ್ಷಗಳ ಅನುಭವವನ್ನು ಹೊಂದಿದೆ. ಇದಕ್ಕೆ ವಿಡಿಡಬ್ಲ್ಯೂ ವಾಣಿಜ್ಯ ಮೇಳವೆಂದೇ ಕರೆಯಲಾಗುತ್ತಿದ್ದು, ಯಶಸ್ವಿಯಾಗಿ ಮೇಳಗಳನ್ನು ನಡೆಸಿಕೊಂಡು ಬಂದಿದೆ. ಇದರ ಜತೆಗೆ ಇಎಂಒ ಹ್ಯಾನ್ನೋವರ್ ಸಹ ಡಸೆಲ್ಡೊರ್ಫ್‍ನ ಎಂಇಟಿಎವಿ ಸೇರ್ಪಡೆಗೊಂಡಿದೆ. ಈ ಸಂಸ್ಥೆ ಮೆಟಲ್‍ವರ್ಕಿಂಗ್‍ನಲ್ಲಿ ತಂತ್ರಜ್ಞಾನಗಳ ಕುರಿತಾದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು 2020 ರ ಮಾರ್ಚ್ 10 ರಿಂದ 13 ರವರೆಗೆ ಆಯೋಜಿಸುತ್ತಿದೆ.

ವಿಡಿಡಬ್ಲ್ಯೂ ಮತ್ತು ಜರ್ಮನ್ ಮಶಿನ್ ಟೂಲ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಸಿಸ್ಟಮ್ಸ್ ಅಸೋಸಿಯೇಶನ್ ವಿಡಿಎಂಎ ಒಳಗೆ 300 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇವುಗಳು ಜರ್ಮನಿಯ ಒಟ್ಟು ಉದ್ಯಮದ ಶೇ.90 ರಷ್ಟು ಭಾಗವನ್ನು ಪ್ರತಿನಿಧಿಸುತ್ತವೆ. ವಿಡಿಡಬ್ಲ್ಯೂ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸದಸ್ಯರನ್ನು ಪ್ರತಿನಿಧಿಸಿ ಅವುಗಳ ಹಿತ ಕಾಯಲಿದೆ.

ಇಎಂಒ ಹ್ಯಾನ್ನೋವರ್ 2019ನ ಸಂಘಟಕನಾಗಿರುವ ವಿಡಿಡಬ್ಲ್ಯೂ ಸಮಗ್ರವಾಗಿ ವೀಕ್ಷಕರು ಮತ್ತು ಪ್ರದರ್ಶಕರಿಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತಿದೆ. ಇದಕ್ಕೆ ಡಚ್ ಮೆಸ್ಸೆ ಎಜಿ ಸಹಕಾರ ನೀಡುತ್ತಿದೆ. ವೀಕ್ಷಕರು ಮತ್ತು ಪ್ರದರ್ಶಕರಿಗೆ ಆನ್‍ಲೈನ್ ನೋಂದಣಿ, ಡಚ್ ಮೆಸ್ಸೆ ಎಜಿಯ ವಿದೇಶಿ ಪ್ರತಿನಿಧಿಗಳಿಗೆ ವೀಸಾ ನೆರವು ನೀಡಲಿದೆ. ಇದಲ್ಲದೇ, ಇಎಂಒ ಹ್ಯಾನ್ನೋವರ್‍ಗೆ ಆಗಮಿಸಲಿರುವ ಪ್ರತಿನಿಧಿಗಳಿಗೆ ವಿಮಾನ ಮತ್ತು ರೈಲು ವ್ಯವಸ್ಥೆಗೆ ನೆರವಾಗುವುದರ ಜತೆಗೆ ರಚನಾತ್ಮಕವಾದ ಪ್ರವಾಸಕ್ಕೂ ಅವಕಾಶ ಕಲ್ಪಿಸಲಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳನ್ನು www.emo-hannover.de ನಲ್ಲಿ ಪಡೆಯಬಹುದಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ