ಶಾಸಕರ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು,ಜ.25-ಶಾಸಕ ಆನಂದ್ ಸಿಂಗ್ ಮೇಲೆ ಜೆ.ಗಣೇಶ್ ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂದಿದೆ.
ಸದ್ಯಕ್ಕೆ ಪೆÇಲೀಸರ ಬಂಧನದಿಂದ ಪಾರಾಗಲು ತಲೆಮರೆಸಿಕೊಂಡಿರುವ ಶಾಸಕ ಗಣೇಶ್ ಅವರ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಆನಂದ್ ಸಿಂಗ್ ಎಂದು ಅವರ ಖಾಸಗಿ ಅಂಗರಕ್ಷಕ ಶರಣಪ್ಪ ಹೇಳಿದ್ದಾರೆ.

ಈ ಪ್ರಕರಣದ ಸಾಕ್ಷಿಧಾರರಲ್ಲಿ ಒಬ್ಬರಾಗಿರುವ ಶರಣಪ್ಪ ಇಂದು ಸುದ್ದಿಸಂಸ್ಥೆಯೊಂದಿಗೆ ಹೇಳಿಕೆ ನೀಡಿದ್ದು, ಕಳೆದ ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಪಾರ್ಟಿ ಮಾಡುತ್ತಿದ್ದರು.

ಪ್ರಾರಂಭದಲ್ಲಿ ಇಬ್ಬರೂ ಖಾಸಗಿಯಾಗಿ ಮಾತನಾಡುತ್ತಿದ್ದರು.ನಂತರ ಕ್ಷೇತ್ರದ ವಿಷಯಗಳು, ಪ್ರಸಕ್ತ ಸಾಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಇದ್ದಕ್ಕಿದ್ದಂತೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಆನಂದ್ ಸಿಂಗ್ ಅವರೇ ಮೊದಲು ಗಣೇಶ್ ಮೇಲೆ ಹಲ್ಲೆ ಮಾಡಿದರು. ಆ ವೇಳೆ ನಾನು ಅವರನ್ನು ತಡೆಯಲು ಹೋದಾಗ, ನೀನು ಮೂಗು ತೂರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದರು.
ಬಳಿಕ ಶಾಸಕ ಆನಂದ್ ಸಿಂಗ್‍ರವರು ಬೆಡ್‍ಲ್ಯಾಂಪ್ ಕಿತ್ತುಕೊಂಡು ಗಣೇಶ್ ಮೇಲೆ ಹಲ್ಲೆ ಮಾಡಿದರು. ನೀವು ಹಿರಿಯರು ಈ ರೀತಿ ಮಾಡುವುದು ಸರಿಯಲ್ಲ ಎಂದು ಗಣೇಶ್‍ರವರು ಪರಿಪರಿಯಾಗಿ ಬೇಡಿಕೊಂಡರೂ ಅವರು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಯಾವಾಗ ಆನಂದ್ ಸಿಂಗ್ ಅವರು ಹಲ್ಲೆ ಮಾಡಿದರೋ ಆಗ ಗಣೇಶ್ ಅವರು ತಿರುಗಿ ಬಿದ್ದರು ಎಂದು ವಿವರಿಸಿದರು.

ನನಗೆ ಗನ್ ಕೊಡುವಂತೆ ಗಣೇಶ್ ಕೇಳಲಿಲ್ಲ. ಇದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯಾಗಿದೆ.ಇಬ್ಬರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಲೆಕ್ಕಿಸದೆ ನಾನೇ ಬಿಡುಸುವ ಪ್ರಯತ್ನವನ್ನು ಮಾಡಿದೆ.ಆ ವೇಳೆಗೆ ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮನಾಯಕ್, ತನ್ವೀರ್ ಸೇಠ್ ಕೂಡ ಬಂದರು.ಅಲ್ಲದೆ ರೆಸಾರ್ಟ್‍ನ ಸಿಬ್ಬಂದಿಯು ಬಂದಿದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲಾಯಿತು.
ಆನಂದ್ ಸಿಂಗ್ ಮತ್ತು ಗಣೇಶ್ ತಾಳ್ಮೆಯಿಂದ ಇದಿದ್ದರೆ ಏನೂ ಆಗುತ್ತಿರಲಿಲ್ಲ. ಇದೊಂದು ಕೆಟ್ಟ ಸಮಯ.ಯಾರನ್ನೂ ದೂಷಣೆ ಮಾಡುವುದಿಲ್ಲ ಎಂದು ಶರಣಪ್ಪ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ