ಬೆಂಗಳೂರು, ಜ.25-ಮೂಲವ್ಯಾಧಿ, ಫಿಷರ್ಸ್ ಮತ್ತು ಫಿಸ್ತುಲಾ ಕುರಿತು ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನದಲ್ಲಿ ಆಗಿರುವ ಸುಧಾರಣೆಗಳ ಕುರಿತು ಹೆಚ್ಚು ಅರಿವು ಮೂಡಿಸುವಲ್ಲಿ ನೆರವಾಗುವ ದೃಷ್ಟಿಯಿಂದ ಬನ್ನೇರು ಘಟ್ಟರಸ್ತೆಯ ಶ್ರೀ ಪಾಲಿ ಅಂಡ್ ಶ್ರೀ ಲ್ಯಾಬ್ನ ಮಿನಿಮಲ್ ಅಕ್ಸೆಸ್ ಸರ್ಜನ್ ಡಾ.ಕಿರಣ್ ಕೆ.ಜೆ. ಆಸ್ಪತ್ರೆ ಆವರಣದಲ್ಲಿ ಇದೇ 27ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಲೇಸರ್ ಪ್ರೊಕ್ಟಾಲಜಿ ಶಿಬಿರ ಆಯೋಜಿಸಿದ್ದಾರೆ.
ಉಚಿತ ನೋಂದಣಿಗಾಗಿ 9916401706 ಮತ್ತು 080-26488444ಅಥವಾಶ್ರೀ ಪಾಲಿ ಕ್ಲಿನಿಕ್, 32ಬಿ, ಪಾಂಡುರಂಗ ನಗರ್, ಅಡಿಗಾಸ್ ಹೋಟೆಲ್ ಮತ್ತು ಎಚ್ಎಸ್ಬಿಸಿ ಬ್ಯಾಂಕ್ಎದುರು, ಬನ್ನೇರುಘಟ್ಟರಸ್ತೆ, ಬೆಂಗಳೂರು 560676 ಇಲ್ಲಿಗೆ ಭೇಟಿ ನೀಡಲು ಕೋರಲಾಗಿದೆ.
ಮೂಲವ್ಯಾಧಿ, ಫಿಷರ್ಸ್ ಮತ್ತು ಫಿಸ್ತುಲಾ ಸಮಸ್ಯೆ ಇದ್ದವರು ಈ ಶಿಬಿರದಲ್ಲಿ ಪಾಲ್ಗೊಂಡು ವೈದ್ಯರನ್ನು ಭೇಟಿ ಮಾಡಿ ಉಚಿತ ಕೌನ್ಸೆಲ್ಲಿಂಗ್ ಪಡೆಯಬಹುದು.