ಬೆಂಗಳೂರು, ಜ.25- ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಶತಮಾನೋತ್ಸವದ ಅಂಗವಾಗಿ ಭಾರತೀಯ ಸಾಮಗಾನ ಸಭಾ ವತಿಯಿಂದ ಜ.30ರಿಂದ ಫೆ.3ರವರೆಗೆ ಮಲ್ಲೇಶ್ವರ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 10ನೇ ವಾರ್ಷಿಕ ಭಾರತೀಯ ಸಂಗೀತೋತ್ಸವ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಭಾದ ಸಂಸ್ಥಾಪಕ ಅಧ್ಯಕ್ಷ ಆರ್.ಆರ್.ರವಿಶಂಕರ್, ಜ.30 ರಂದು ಸಂಗೀತೋತ್ಸವಕ್ಕೆ ಭಾರತೀಯ ವಿe್ಞÁನ ಸಂಸ್ಥೆಯ ಪ್ರಾಧ್ಯಾಪಕ ಕೆ.ಜೆ.ರಾವ್ ಚಾಲನೆ ನೀಡಲಿದ್ದಾರೆ.ಸಂಗೀತ ಕಲಾರತ್ನ ಮೈಸೂರು ವಿ.ಸುಬ್ರಹ್ಮಣ್ಯ, ಸಭಾದ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಭಾಗವಹಿಸಲಿದ್ದಾರೆ.ಮೈಸೂರು ಬನಿ ಶೈಲಿಯ ಆಳ ವಿಸ್ತಾರ, ಹರವು ವೀಣೆ, ಪಿಟೀಲು, ಹಾಡುಗಾರಿಕೆ ಮುಂತಾದ ಕಾರ್ಯಕ್ರಮಗಳು ಅಂದು ನಡೆಯಲಿದೆ ಎಂದು ಹೇಳಿದರು.
ಜ.30ರಿಂದ ಆರಂಭವಾಗುವ ಉತ್ಸವದಲ್ಲಿ ಸಂಗೀತ ವಿದ್ವಾಂಸರು ಹಲವು ಕಚೇರಿಗಳನ್ನು ನಡೆಸಿಕೊಡಲಿದ್ದಾರೆ. ಫೆ.3 ರಂದು ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ಅವರಿಗೆ ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಪ್ರಶಸ್ತಿಯು ಒಂದು ಲಕ್ಷ ನಗದು, ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.