ಬೆಂಗಳೂರು, ಜ.25-ಡಾ.ಪುಸ್ತಕಂ ರಮಾ ಅವರ ಅದ್ಭುತ ಪರಿಕಲ್ಪನೆಯ ಭಾವಗೀತೆಗಳ ಸಂಗಮ ಗಾಯನ ಕಾರ್ಯಕ್ರಮ ಬಹು ಅಚ್ಚುಕಟ್ಟಾಗಿ ನಡೆಯಿತು.
ಒಂದೇ ವೇದಿಕೆಯ ಮೇಲೆ , ರಮಾ ಅವರು, ಹದಿನಾರು ಗಾಯಕರನ್ನು, ಹನ್ನೆರಡು ಜನ ಸಹವಾದ್ಯದವರನ್ನು ಕಲೆ ಹಾಕಿ ಹಾಡಿಸಿದ್ದು, ಪ್ರತಿಯೊಬ್ಬ ಖ್ಯಾತ ಗಾಯಕರೂ ರಮ್ಯವಾದ, ಮಧುರ ಭಾವಗೀತೆಯನ್ನು ಹಾಡಿ ಕಲಾರಸಿಕರ ಹೃನ್ಮನ ತಣಿಸಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಕವಿ ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ, ಖ್ಯಾತ ಗಾಯಕಿ ಹೆಚ್.ಆರ್ ಲೀಲಾವತಿ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಸಾಧು ಕೋಕಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಚಲನಚಿತ್ರ ನಟ ಪ್ರಣಯರಾಜ ಶ್ರೀನಾಥ್ ಉಪಸ್ಥಿತರಿದ್ದರು.
ಹಿರಿಯ ಗಾಯಕಿಯರಾದ ಬಿ.ಕೆ.ಸುಮಿತ್ರ, ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್, ಎಂ.ಕೆ.ಜಯಶ್ರೀ, ಮಾಲತಿ ಶರ್ಮ, ಇಂದೂ ವಿಶ್ವನಾಥ್, ಪಿ.ರಮಾ, ಚಂದ್ರಿಕಾ ಗುರುರಾಜï, ಬಿ.ಆರ್.ಗೀತಾ ಮತ್ತು ನೀಲಾ ರಾಮಾನುಜ ಹಾಗೂ ಹಿರಿಯ ಗಾಯಕರಾದ ಗರ್ತಿಕೆರೆ ರಾಘಣ್ಣ, ಶ್ರೀನಿವಾಸ ಉಡುಪ, ಪುತ್ತೂರು ನರಸಿಂಹ ನಾಯಕ್, ವೈ.ಕೆ.ಮುದ್ದುಕೃಷ್ಣ, ಶಂಕರï ಶಾನಭಾಗ್ ಮತ್ತು ವಿಶ್ವನಾಥ ನಾಕೋಡ್ ಭಾವಗೀತೆಗಳನ್ನು ಹಾಡಿ ಮನರಂಜಿಸಿದರು.
ಖ್ಯಾತ ತಬಲವಾದಕ ವೇಣುಗೋಪಾಲï ಸಾಥ್ ನೀಡಿದ್ದರು.
ಇದೇ ವೇಳೆ ನಿರಂತರಂ ನೃತ್ಯಸಂಸ್ಥೆಯ ನಿರ್ದೇಶಕಿ ಪಿ. ರಮಾ, ಗಾಯಕರಿಗೆ ಚಿನ್ನದ ಲೇಪದ ಕಂಕಣ ತೊಡಿಸಿ ಗೌರವಿಸಿದರು.