ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ: ಸುಂದರ ಮುಖದಿಂದ ಮತಗೆಲ್ಲಲು ಸಾಧ್ಯವಿಲ್ಲವೆಂದ ಬಿಜೆಪಿ ನಾಯಕ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕಾಲಟ್ಟಿದ್ದು, ಉತ್ತರ ಪ್ರದೇಶ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ನೇಮಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಸುಂದರವಾದ ಮುಖದಿಂದ ಮತ ಗೆಲ್ಲಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಿಯಾಂಕಾ ಭೂ ಹಗರಣ ಹಾಗೂ ಹಲವು ಭ್ರಷ್ಟಾಚಾರ ಪ್ರಕರಣಗಳ ಆರೋಪಿ ರಾಬರ್ಟ್​ ವಾದ್ರಾ ಅವರ ಪತ್ನಿ. ಪ್ರಿಯಾಂಕಾ ತುಂಬಾ ಸುಂದರವಾಗಿದ್ದಾರೆ. ಆದರೆ ಅದರ ಹೊರತಾಗಿ ರಾಜಕೀಯ ಸಾಧನೆಗಳೇನೂ ಇಲ್ಲ ಎಂದು ಈಗ ಬಿಜೆಪಿ ನಾಯಕ ಹಾಗೂ ಬಿಹಾರ ಸಚಿವ ವಿನೋದ್​ ನಾರಾಯಣ್​ ಜಾ ಕುಟುಕಿದ್ದಾರೆ.

ಪ್ರಿಯಾಂಕಾ ಗಾಂಧಿ ಯುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂದಾಗಿನಿಂದಲು ಬಿಜೆಪಿ ನಾಯಕರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ನಾಯಕ ವಿನೋದ್ ನಾರಯಣ್ ಜಾ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಬಿಹಾರದ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್ ಮೋದಿ ಅವರು, ದೋಷಾರೋಪಣೆ ಹೊತ್ತ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಹೊಂದಿರುವ ಮಹಿಳೆ ಎಂದಿದ್ದಲ್ಲದೆ, ಇಂತಹ ಹಿನ್ನೆಲೆಯವರ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್​ ಸಂತೋಷಗೊಂಡಿದೆ ಎಂದು ಲೇವಡಿ ಮಾಡಿದ್ದರು.

Priyanka Gandhi is just a beautiful face, says Bihar Minister Vinod Narayan Jha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ