ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕಾಲಟ್ಟಿದ್ದು, ಉತ್ತರ ಪ್ರದೇಶ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ನೇಮಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಸುಂದರವಾದ ಮುಖದಿಂದ ಮತ ಗೆಲ್ಲಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಿಯಾಂಕಾ ಭೂ ಹಗರಣ ಹಾಗೂ ಹಲವು ಭ್ರಷ್ಟಾಚಾರ ಪ್ರಕರಣಗಳ ಆರೋಪಿ ರಾಬರ್ಟ್ ವಾದ್ರಾ ಅವರ ಪತ್ನಿ. ಪ್ರಿಯಾಂಕಾ ತುಂಬಾ ಸುಂದರವಾಗಿದ್ದಾರೆ. ಆದರೆ ಅದರ ಹೊರತಾಗಿ ರಾಜಕೀಯ ಸಾಧನೆಗಳೇನೂ ಇಲ್ಲ ಎಂದು ಈಗ ಬಿಜೆಪಿ ನಾಯಕ ಹಾಗೂ ಬಿಹಾರ ಸಚಿವ ವಿನೋದ್ ನಾರಾಯಣ್ ಜಾ ಕುಟುಕಿದ್ದಾರೆ.
ಪ್ರಿಯಾಂಕಾ ಗಾಂಧಿ ಯುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂದಾಗಿನಿಂದಲು ಬಿಜೆಪಿ ನಾಯಕರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ನಾಯಕ ವಿನೋದ್ ನಾರಯಣ್ ಜಾ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು, ದೋಷಾರೋಪಣೆ ಹೊತ್ತ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಹೊಂದಿರುವ ಮಹಿಳೆ ಎಂದಿದ್ದಲ್ಲದೆ, ಇಂತಹ ಹಿನ್ನೆಲೆಯವರ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಸಂತೋಷಗೊಂಡಿದೆ ಎಂದು ಲೇವಡಿ ಮಾಡಿದ್ದರು.
Priyanka Gandhi is just a beautiful face, says Bihar Minister Vinod Narayan Jha