ಬೆಂಗಳೂರು,ಜ.24- ಮಾಧ್ಯಮಗಳು ಟೆರೆರಿಸ್ಟ್ಗಿಂತ ಅಪಾಯಕಾರಿಯಾಗಿದ್ದು, ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಪ್ರತಿದಿನವು ಕೊಲ್ಲುತ್ತಿರುತ್ತವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅನನ್ಯ ಕ್ರಿಯೇಷನ್ ಸಹಯೋಗದಲ್ಲಿ ನಡೆದ ಟೆಲಿವಿಷನ್ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟೆರರಿಸ್ಟ್ಗಳು ಒಂದೇ ಬಾರಿ ಗುಂಡು ಹೊಡೆದು ಸಾಯಿಸುತ್ತಾರೆ. ಆದರೆ ಮಾಧ್ಯಮದವರು ಸಾಯಿಸುತ್ತಲೇ ಇರುತ್ತಾರೆ ಎಂದು ದೂರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಎಡಿಟ್ ಮಾಡಿಕೊಳ್ಳುತ್ತಿವೆ. ಇತ್ತೀಚೆಗೆ ನಮಗೂ ಈ ಅನುಭವ ಆಗಿದೆ.ಖಚಿತ ಮಾಹಿತಿ ಮೇರೆಗೆ ಸುದ್ದಿ ಪ್ರಕಟಿಸಬೇಕು ಎಂದು ಮಾಧ್ಯಮದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.