ಟೀಂ ಇಂಡಿಯಾಕ್ಕೆ 8 ವಿಕೆಟ್‍ಗಳ ಭರ್ಜರಿ ಜಯ

ನೇಪಿಯರ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. 158 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಕೊಹ್ಲಿ ಪಡೆಗೆ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅರ್ಧ ಶತಕ ಬಾರಿಸಿ ಮಿಂಚಿದ್ರು. ನಾಯಕ ವಿರಾಟ್ ಕೊಹ್ಲಿ 45 ರನ್ , ರೋಹಿತ್ ಶರ್ಮಾ 11 ಮತ್ತು ಅಂಬಾಟಿ ರಾಯ್ಡು ಅಜೇಯ 13 ರನ್ ಗಳಿಸಿದ್ರು. ಇದಕ್ಕೂ ಮುನ್ನ ಟಾಸ್ ಗೆದ್ದು ಆಯ್ದುಕೊಂಡ ಕಿವೀಸ್ಗೆ ಮೊಹ್ಮದ್ ಶಮಿ, ಕುಲ್ದೀಪ್ ದಾಳಿಗೆ ತ್ತತ್ತರಿಸಿ ಕೇವಲ 38 ಓವರ್ಗಳಲ್ಲಿ 157 ರನ್ಗಳಿಗೆ ಆಲೌಟ್ ಆಯಿತು.

158 ರನ್‍ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂಇಂಡಿಯಾಕ್ಕೆ ಆರಂಭ ಉತ್ತಮವಾಗಿರಲಿಲ್ಲ. 11 ರನ್‍ಗಳಿಸಿದ್ದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಬ್ರೆಸ್‍ವೆಲ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.

ಎರಡನೇ ಕ್ರಮಾಂಕದಲ್ಲಿ ಕೊಹ್ಲಿ ಬಂದ ಕೆಲವೇ ಹೊತ್ತಿನಲ್ಲಿ ಸೂರ್ಯನ ಬೆಳಕು ಅಡ್ಡಿಪಡಿಸುತ್ತಿದ್ದ ಕಾರಣ ಪಂದ್ಯವನ್ನ ಅರ್ಧ ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು. ನಂತರ ತಡವಾಗಿ ಆರಂಭವಾಗಿದ್ದರಿಂದ ಭಾರತಕ್ಕೆ 46 ಓವರ್‍ಗಳಲ್ಲಿ 156 ರನ್ ಗೆಲುವಿನ ಗುರಿ ನೀಡಲಾಯಿತು.

ನಾಯಕ ವಿರಾಟ್ ಕೊಹ್ಲಿ 45 ರನ್‍ಗಳಿಸಿ ಔಟ್ ಆದ್ರಿ ಶಿಖರ್ ಧವನ್ ಅರ್ಧ ಶತಕ ಬಾರಿಸಿ ಮಿಂಚಿದರು. ಕೊನೆಗೆ ಟೀಂ ಇಂಡಿಯಾ 34.5 ಓವರ್‍ಗಳಲ್ಲಿ 256 ರನ್‍ಗಳಿಸಿ ಗೆಲುವಿನ ದಡ ಸೇರಿತು.

3 ವಿಕೆಟ್ ಪಡೆದು ಮಿಂಚಿದ ಮೊಹ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ