ಶಾಸಕ ಗಣೇಶ್ ಪತ್ತೆಗೆ ಪೊಲೀಸರಿಂದ ವ್ಯಾಪಕ ಶೋಧ

ಬೆಂಗಳೂರು, ಜ.24- ಕಂಪ್ಲಿ ಶಾಸಕ ಗಣೇಶ್ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ರಾಮನಗರ ಜಿಲ್ಲಾ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಗಣೇಶ್ ಅವರ ಬಂಧನಕ್ಕೆ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ಎರಡು ತಂಡ ಬಳ್ಳಾರಿ, ಮೈಸೂರು, ಮುಂಬೈ ಸೇರಿದಂತೆ ಇನ್ನಿತರ ಕಡೆ ಶೋಧ ಕೈಗೊಂಡಿದೆ.

ಇನ್ನೊಂದು ತಂಡ ಘಟನೆ ನಡೆದ ರೆಸಾರ್ಟ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದೆ ಹಾಗೂ ಅಲ್ಲಿನ ನೌಕರರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.

ಅಂದು ಆನಂದ್‍ಸಿಂಗ್ ಹಾಗೂ ಗಣೇಶ್ ಜಗಳ ಬಿಡಿಸಿದ ವೇಳೆ ಸ್ಥಳದಲ್ಲಿದ್ದ ಶಾಸಕರ ಹೇಳಿಕೆಯನ್ನು ಸಹ ಪಡೆದುಕೊಳ್ಳುತ್ತಿರುವ ಪೆÇಲೀಸರು ರೆಸಾರ್ಟ್‍ನಲ್ಲಿನ ಸಿಸಿ ಟಿವಿ ಪುಟೇಜ್‍ಗಳನ್ನು ಪರಿಶೀಲಿಸುತ್ತಿದ್ದಾರೆ.

ಘಟನೆ ವಿವರ:
ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಜ.19ರಂದು ರಾತ್ರಿ ಬಳ್ಳಾರಿ ಶಾಸಕ ಆನಂದ್‍ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಬಡಿದಾಡಿಕೊಂಡಿದ್ದರು.
ಈ ವೇಳೆ ಗಣೇಶ್‍ನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಆನಂದ್‍ಸಿಂಗ್ ಅವರು ಅಪೆÇಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಗಣೇಶ್ ನಾಪತ್ತೆಯಾಗಿದ್ದು, ಇವರ ಬಂಧನಕ್ಕೆ ವ್ಯಾಪಕ ಶೋಧ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ