ಡಾ.ಪಂ.ನರಸಿಂಹಲು ವಡವಾಟಿಯವರು ಲಾಸ್ ಏಂಜಲೀಸ್ಸಿನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಪಾಂಚಜನ್ಯ ಮೊಳಗಿಸಿದ್ದು ನಾಡಿನ ಭಾಗ್ಯ

Varta Mitra News

ಬೆಂಗಳೂರು, ಜ.24- ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕ ಡಾ.ಪಂ.ನರಸಿಂಹಲು ವಡವಾಟಿ ಅವರು ಕ್ಲಾರಿಯೋನೆಟ್ ಮಾಂತ್ರಿಕರಾಗಿ, ಹೈದರಾಬಾದ್ ಕರ್ನಾಟಕದ ಹಿಂದುಳಿದ ರಾಯಚೂರಿನ ವಡವಾಟಿ ಗ್ರಾಮದಿಂದ ಏಕಲವ್ಯರಂತೆ ವಿದ್ಯೆಗಳಿಸಿ, ಸಾರ್ಥಕ ಸಾಧನೆ ಮಾಡಿರುವ ಅವರು ವಿಶ್ವಮಟ್ಟದ ಸಂಗೀತ ಸಮ್ಮೇಳನದಲ್ಲಿ ಸ್ಥಾನ ಪಡೆದುಕೊಂಡು ಲಾಸ್ ಏಂಜಲೀಸ್‍ನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪಾಂಚಜನ್ಯ ಮೊಳಗಿಸಿದ್ದು ನಾಡಿನ ಭಾಗ್ಯ ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ಹೇಳಿದರು.

ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ಕಲಾವಿದ ಡಾ.ಪಂ. ನರಸಿಂಹಲು ವಡವಾಟಿ ಅವರ ಜನ್ಮದಿನದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಕಲಾವಿದರ ದಿನ ಹಾಗೂ ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ.21ರಂದು ಕಲಾವಿದರ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣ. ಅಲ್ಲದೆ ನಡೆದಾಡುವ ದೇವರು, ಕರ್ನಾಟಕ ರತ್ನಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ದಿನ. ಹಾಗಾಗಿ ಕಲಾವಿದರ ದಿನ ಅಜರಾಮರವಾಗಲಿ ಎಂದು ಚಂಪಾ ಹಾರೈಸಿದರು.

ಎರಡು-ಮೂರು ವರ್ಷಗಳು ಕುಳಿತು ಕಷ್ಟಪಟ್ಟು ಓದಿದರೆ ಐಎಎಸ್ ಅಧಿಕಾರಿಯಾಗಬಹುದು.ಆದರೆ, ಕಲಾವಿದನಾಗಲು ಸತತವಾಗಿ ಜೀವನ ಪೂರ್ತಿ ಸಾಧನೆ ಮಾಡಬೇಕಾಗುತ್ತದೆ ಎಂದರು.

ಕಲಾವಿದರ ದಿನ ಎಂಬುದೇ ಅದ್ಭುತ ಕಲ್ಪನೆ. ಅಧಿಕಾರಿಗಳನ್ನು ಅಧಿಕಾರದಲ್ಲಿದ್ದಾಗ ಎಲ್ಲರೂ ಗೌರವಿಸುತ್ತಾರೆ.ಆದರೆ, ಕಲಾವಿದರನ್ನುಜೀವನಪೂರ್ತಿ ಗೌರವಿಸುತ್ತಾರೆ. ಕಲಾವಿದರಿಗೆ ನಿಜವಾಗಿ ಎಷ್ಟು ಗೌರವ ಸಿಗಬೇಕಿತ್ತೋ ಅಷ್ಟು ಗೌರವ ಸಿಗುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ