
ಬೆಂಗಳೂರು, ಜ.23-ಕೇಂದ್ರೀಯ ಕನ್ನಡ (ವಿಭಾಗೀಯ ಕನ್ನಡ ಸಂಘಗಳ ಒಕ್ಕೂಟ)ಸಂಘದ ವತಿಯಿಂದ ಮೂರು ವರ್ಷ ನೂರು ಹೆಜ್ಜೆ ತ್ರೈವಾರ್ಷಿಕ ಯೋಜನೆಯಡಿ ಸದಸ್ಯರಿಗೆ ಕನ್ನಡದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಮಾಸದ ಮಾತು ಮಾಲಿಕೆಯಡಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ನಾಳೆ ಮಧ್ಯಾಹ್ನ 2.30ಕ್ಕೆ ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಪತ್ರಕರ್ತರಾದ ಡಾ.ಪದ್ಮರಾಜ ದಂಡಾವತಿ ಅವರು ಆಧುನಿಕ ಕರ್ನಾಟಕದ ಆತಂಕಗಳು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಚ್ಎಎಲ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾ ಮತ್ತು ಅ ಸಂಘದ ಅಧ್ಯಕ್ಷ ಬಿ.ಎನ್.ಶಿವಲಿಂಗ, ಹಿರಿಯ ವ್ಯವಸ್ಥಾಪಕ ಜೆ.ಜೋಷಿ ಪಾಲ್ಗೊಳ್ಳಲಿದ್ದಾರೆ.