ಭಾರತ್ ಕ್ಯೂ ಆರ್ ಸೌಲಭ್ಯವನ್ನು ಆರಂಭಿಸುತ್ತಿರುವ ಪೇನಿಯರ್ ಬೈ ಸಂಸ್ಥೆ

ಬೆಂಗಳೂರು, ಜ.23- ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಯೋಜನೆಗೆ ಒಪ್ಪಿಗೆ ಸಿಕ್ಕ ಕೆಲವೇ ದಿನಗಳಲ್ಲಿ ಪೇನಿಯರ್ ಬೈ ಸಂಸ್ಥೆಯು ಚಿಲ್ಲರೆ ವಹಿವಾಟುದಾರರು ಮತ್ತು ಗ್ರಾಹಕರಿಗೆ ಸುಲಭ ವ್ಯವಹಾರ ಸಾಧ್ಯವಾಗುವಂತೆ ಕ್ರಮಕ್ಕೆ ಮುಂದಾಗಿದೆ.

ಈ ಹಿಂದೆ ಎಇಪಿಎಸ್ ಸೌಲಭ್ಯ ಒದಗಿಸುತ್ತಿದ್ದ ಕಂಪೆನಿಯು ಈಗ ಯೆಸ್‍ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಮಿಷನ್ ಆಫ್ ಇಂಡಿಯಾ ಜತೆಗೂಡಿ ಭಾರತ್ ಕ್ಯೂ ಆರ್ ಸೌಲಭ್ಯವನ್ನು ಆರಂಭಿಸುತ್ತಿದೆ ಎಂದು ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಆನಂದಕುಮಾರ್ ಬಜಾಜ್ ತಿಳಿಸಿದ್ದಾರೆ.

ಕಾರ್ಡ್ ರಹಿತ ವ್ಯವಹಾರ ವಿಧಾನಗಳು ಮತ್ತು ವ್ಯಾಪಾರಿಗಳಿಗೆ ತಂತ್ರಜ್ಞಾನಾಧಾರಿತ ವಿಧಗಳ ಮೂಲಕ ಹಣ ಸ್ವೀಕರಿಸುವುದನ್ನು ಉತ್ತೇಜಿಸುವುದು ಕಂಪೆನಿಯ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ